ಹೈದರಾಬಾದ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹಲವಾರು ಜೀವಗಳನ್ನು ಬಲಿ ಪಡೆದು, ಅನೇಕರು ಗಾಯಗೊಂಡ ಘಟನೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಲು, ಇಂದು ರಾತ್ರಿ ಹೈದರಾಬಾದ್ನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಆಟಗಾರರು ಕಪ್ಪು ಪಟ್ಟಿಗಳನ್ನು ಧರಿಸಲಿದ್ದಾರೆ.
ಸಂತಾಪ ಸೂಚಕವಾಗಿ, ಪಂದ್ಯದಲ್ಲಿ ಚಿಯರ್ಲೀಡರ್ಗಳು ಅಥವಾ ಪಟಾಕಿಗಳು ಇರುವುದಿಲ್ಲ, ದಾಳಿಯ ನಂತರ ದೇಶ ಅನುಭವಿಸಿದ ಸಾಮೂಹಿಕ ದುಃಖವನ್ನು ಪ್ರತಿಬಿಂಬಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪಂದ್ಯದ ಸಮಯದಲ್ಲಿ ಅಂಪೈರ್ಗಳು ದುಃಖದ ಸಂಕೇತವಾಗಿ ಕಪ್ಪು ಪಟ್ಟಿಗಳನ್ನು ಧರಿಸುತ್ತಾರೆ. ಒಂದು ನಿಮಿಷ ಮೌನ ಆಚರಿಸಲಾಗುತ್ತದೆ.
ಮುಫದ್ದಲ್ ವೋಹ್ರಾ ಟ್ವೀಟ್ ಮಾಡಿ, “ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ತಂಡದ ಆಟಗಾರರು ಮತ್ತು ಅಂಪೈರ್ಗಳು ಇಂದು ರಾತ್ರಿ ಕಪ್ಪು ಪಟ್ಟಿಗಳನ್ನು ಧರಿಸುತ್ತಾರೆ. ಒಂದು ನಿಮಿಷ ಮೌನ ಆಚರಿಸಲಾಗುತ್ತದೆ. -ಇಂದು ರಾತ್ರಿ ಪಟಾಕಿಗಳಿಲ್ಲ, ಚಿಯರ್ಲೀಡರ್ಗಳೂ ಇರುವುದಿಲ್ಲ” ಎಂದಿದ್ದಾರೆ.
ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಂಜೆ 7:30 ಕ್ಕೆ ಮುಂಬೈ ಇಂಡಿಯನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯ ಆರಂಭವಾಗಲಿದೆ.
🚨 NO FIREWORKS, CHEERLEADERS. 🚨
– Players of MI and SRH and umpires will be wearing black armbands tonight.
– A one minute silence will be observed.
– No fireworks, cheerleaders tonight. (Vipul Kashyap/ANI). pic.twitter.com/Ra0m7l92ir— Mufaddal Vohra (@mufaddal_vohra) April 23, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.