ನವದೆಹಲಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಗುರುವಾರ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕೈಗೆಟುಕುವ ದರದಲ್ಲಿ ಆಹಾರವನ್ನು ಒದಗಿಸುವ ‘ಉಡಾನ್ ಯಾತ್ರಿ ಕೆಫೆ’ಯನ್ನು ಉದ್ಘಾಟಿಸಿದರು, ಇದು ಈ ಉಪಕ್ರಮದಡಿಯಲ್ಲಿ ಉದ್ಘಾಟನೆಗೊಂಡ ಎರಡನೇ ಸೌಲಭ್ಯ ಇದಾಗಿದೆ.
ಮೊದಲ ಉಡಾನ್ ಯಾತ್ರಿ ಕೆಫೆಯನ್ನು ಡಿಸೆಂಬರ್ 19, 2024 ರಂದು ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಾರಂಭಿಸಲಾಯಿತು.
ಕೋಲ್ಕತ್ತಾ ಔಟ್ಲೆಟ್ ಪ್ರಯಾಣಿಕರಿಂದ ಅಗಾಧ ಪ್ರತಿಕ್ರಿಯೆಯನ್ನು ಪಡೆದಿದ್ದು, ಈ ಉಪಕ್ರಮವನ್ನು ರಾಷ್ಟ್ರವ್ಯಾಪಿ ವಿಸ್ತರಿಸಲು ಪ್ರೇರೇಪಿಸಿದೆ.
T1 ದೇಶೀಯ ಟರ್ಮಿನಲ್ನ ಪೂರ್ವ-ಚೆಕ್ ಪ್ರದೇಶದಲ್ಲಿ ನೆಲೆಗೊಂಡಿರುವ ಚೆನ್ನೈ ಉಡಾನ್ ಯಾತ್ರಿ ಕೆಫೆ, ಪ್ರಯಾಣಿಕರಿಗೆ
ನೀರಿನ ಬಾಟಲ್ ಅನ್ನು ರೂ 10ಕ್ಕೆ, ಚಹಾವನ್ನು ರೂ 10, ಕಾಫಿಯನ್ನು ರೂ 20, ಸಮೋಸಾವನ್ನು ರೂ 20ಕ್ಕೆ, ಸಿಹಿ ತಿಂಡಿಯನ್ನ ರೂ 20ಕ್ಕೆ ನೀಡುತ್ತದೆ.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ನಾಯ್ಡು, ಈ ಉಪಕ್ರಮವು ವಿಮಾನ ಪ್ರಯಾಣವನ್ನು ಹೆಚ್ಚು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.