ನವದೆಹಲಿ: ಫೆಬ್ರವರಿ 14, ಭಾರತದ ಇತಿಹಾಸದಲ್ಲಿ ಕರಾಳ ದಿನ. 2019 ರ ಈ ದಿನದಂದು, ದೇಶವು ತನ್ನ 40 ವೀರ ಯೋಧರನ್ನು ಅತ್ಯಂತ ಅಮಾನವೀಯ ಕ್ರೂರ ದಾಳಿಯಲ್ಲಿ ಕಳೆದುಕೊಂಡಿತು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF)ಯ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಯಿತು, ಇದರ ಪರಿಣಾಮವಾಗಿ 40 ವೀರ ಸೈನಿಕರು ದುರಂತಮಯವಾಗಿ ಸಾವನ್ನಪ್ಪಿದರು.
ಸಮಸ್ತ ಭಾರತೀಯರು ಇಂದು ಹುತಾತ್ಮರಾದ ವೀರ ಯೋಧರನ್ನು ನೆನೆದು ಕಂಬನಿ ಮಿಡಯುತ್ತಿದ್ದಾರೆ, ಗೌರವಗಳನ್ನು ಅರ್ಪಣೆ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ವೀರ ಸೈನಿಕರಿಗೆ ಗೌರವ ಸಲ್ಲಿಸಿದರು ಮತ್ತು ರಾಷ್ಟ್ರದ ಕಡೆಗೆ ಅವರ ಧೈರ್ಯ ಮತ್ತು ಕರ್ತವ್ಯವು ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು.
“ಭಯೋತ್ಪಾದನಾ ಕೃತ್ಯಗಳು ಅತ್ಯಂತ ಮೂಲಭೂತ ಮಾನವ ಹಕ್ಕನ್ನು – ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತವೆ. ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ನಮ್ಮ ವೀರ ಸೈನಿಕರ ಶೌರ್ಯಕ್ಕೆ ಗೌರವ ಸಲ್ಲಿಸಲು ನಾನು ರಾಷ್ಟ್ರದೊಂದಿಗೆ ಸೇರುತ್ತೇನೆ. ರಾಷ್ಟ್ರದ ಕಡೆಗೆ ಅವರ ಧೈರ್ಯ ಮತ್ತು ಕರ್ತವ್ಯವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ. ಜೈ ಹಿಂದ” ಎಂದು ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಫೆಬ್ರವರಿ 14, 2019 ರಂದು, 22 ವರ್ಷದ ಆತ್ಮಾಹುತಿ ಬಾಂಬರ್ ಬಸ್ ಅನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಗೆ 40 CRPF ಸಿಬ್ಬಂದಿ ಹುತಾತ್ಮರಾದರು. ಈ ಬಸ್, ಜಮ್ಮುವಿನಿಂದ ಶ್ರೀನಗರಕ್ಕೆ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಪ್ರಯಾಣಿಸುತ್ತಿದ್ದ 2,500 ಅರೆಸೈನಿಕ ಪಡೆಗಳು ಮತ್ತು 78 ವಾಹನಗಳ ದೊಡ್ಡ ಬೆಂಗಾವಲಿನ ಭಾಗವಾಗಿತ್ತು.
Acts of terror take away the most fundamental human right – the right to life.
I join the nation in paying homage to the valour of our brave soldiers who sacrificed their lives in the dastardly Pulwama terror attack. Their courage & duty towards the nation will continue to… pic.twitter.com/j03J0JWJ24— Hardeep Singh Puri (@HardeepSPuri) February 14, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.