ಟೋಕ್ಯೊ: ಜಪಾನ್ನ ಬಹುರಾಷ್ಟ್ರೀಯ ಕಂಪೆನಿಯಾಗಿರುವ ಶಾರ್ಪ್ ವಿಶ್ವದ ಮೊದಲ ’ರೋಬೋಟ್ ಫೋನ್’ನ್ನು ತಯಾರಿಸಿದೆ. ’ರೋಬೋಹಾನ್’ (RoboHon) ಎಂಬ ಈ ಫೋನ್ ಇತರ ಫೋನ್ಗಳಂತೆ ಕರೆ ಸ್ವೀಕರಿಸುವುದು, ಫೋಟೋಗಳ ಸಂಯೋಜನೆ, ನಕ್ಷೆಗಳ ತೋರಿಸುವ, ನೃತ್ಯ ಮಾಡುವ ಮತ್ತಿತರ ಕಾರ್ಯಗಳನ್ನು ಮಾಡಬಲ್ಲದು.
ಬೇಸಿಕ್ ಟಚ್ಸ್ಕ್ರೀನ್ ಆಗಿರುವ ಈ ಮೊಬೈಲ್ ಕಿಸೆಯಲ್ಲಿ ಸೂಕ್ತವಾಗೇ ಇಡಬಲ್ಲ ಸಣ್ಣ ಹಾಗೂ ಆಕರ್ಷಕ ಮೊಬೈಲ್ ಆಗಿದೆ. ಆದರೆ ಇದರ ಪ್ರತೀ ಹೋಮ್ಸ್ಕ್ರೀನ್ನಲ್ಲಿ ಕೇವಲ ನಾಲ್ಕು ಐಕಾನ್ಗಳು ಮಾತ್ರ ಲಭ್ಯವಾಗಲಿದೆ.
ಟೋಕ್ಯೋದ ಪ್ರಸಿದ್ಧ ಪ್ರೊಫೆಸರ್ ಹಾಗೂ ರೋಬೋಟ್ ತಯಾರಕ ಟೋಮೋತಾಕಾ ತಾಕಾಹಾಶಿ ಅವರು ಅಭಿವೃದ್ಧಿ ಪಡಿಸಿರುವ ಈ ಮೊಬೈಲ್ ಮುಂದಿನ ವರ್ಷ ಬಿಡುಗಡೆಗೊಳಿಸಲಾಗುತ್ತಿದೆ. ರೋಬೋಹಾನ್ ಬಳಸುವ ಮೂಲ ವಿಧಾನ ಅದರ ಜೊತೆ ಸಂವಹನ ನಡೆಸುವ ಮೂಲಕವೇ ಆಗಿದೆ. ಟಚ್ಸ್ಕ್ರೀನ್ ಬಳಸುವುದು ಎರಡನೇ ವಿಧಾನವಾಗಿದೆ ಎಂದು engadget.com ವರದಿ ಮಾಡಿದೆ.
ಈ ರೋಬೋಟ್ ಫೋನ್ನ ಹಿಂಭಾಗದಲ್ಲಿ ೨ ಇಂಚ್ ಡಿಸ್ಪ್ಲೇ ಸ್ಕ್ರೀನ್, ಹಾಗೂ ಅದರ ಮುಖದ ಭಾಗದಲ್ಲಿ ಬಿಲ್ಟ್-ಇನ್ ಕ್ಯಾಮೆರಾ ಹಾಗೂ ಪ್ರಾಜೆಕ್ಟರ್ನ್ನು ಹೊಂದಿದೆ. ಇದರ ತೋಳು ಮತ್ತು ಕಾಲುಗಳು ನಡೆದಾಡಲು ಸಹಕಾರಿಯಾಗಲಿದ್ದು, ವಿನಂತಿಸಿದಲ್ಲಿ ನೃತ್ಯವನ್ನೂ ಮಾಡಬಲ್ಲದು.
ಕರೆಗಳನ್ನು ಸ್ವೀಕರಿಸುವ, ಮೆಮೊಗಳನ್ನು ಪಡೆಯುವ, ಪ್ರಾಜೆಕ್ಟರ್ ಸಹಾಯದಿಂದ ಫೋಟೋ-ವೀಡಿಯೋಗಳನ್ನು ತೆಗೆಯುವ, ಪ್ರಕ್ಷೇಪಕ ಸಂದೇಶ (Text Messages)ಗಳನ್ನು ಪಡೆಯುವುದು, ಪ್ರತಿಕ್ರಿಯಿಸುವ ಮೊದಲಾದ ಕಾರ್ಯಗಳನ್ನು ಹೊಂದಿದೆ. ಇದು ಧ್ವನಿ ಮತ್ತು ಮುಖವನ್ನು ಗುರುತಿಸುವ ಮೂಲಕ ಬಳಕೆದಾರರನ್ನು ಪತ್ತೆ ಹಚ್ಚುತ್ತದೆ.
ಶಾರ್ಪ್ ಕಂಪೆನಿಯು ಇದರ ನಿಗದಿತ ಬೆಲೆಯನ್ನು ಇನ್ನಷ್ಟೇ ಬಹಿರಂಗಪಡಿಸಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.