ಅಹ್ಮದಾಬಾದ್: ಗುಜರಾತ್ ರಸ್ತೆ ಸಾರಿಗೆ ಸಂಸ್ಥೆ (GSRTC)ಯು ರಾಜ್ಯದ 27 ಹೋಟೆಲ್ಗಳೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಿದೆ. ಜನರನ್ನು ಮೋಸಗೊಳಿಸುವ ಹೆಸರನ್ನು ಹೊಂದಿರುವ ವಾಣಿಜ್ಯ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವ ಪ್ರಯತ್ನದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಶೇಷವಾಗಿ ಹಿಂದೂ ಹೆಸರನ್ನು ಹೊಂದಿರುವ ಮುಸ್ಲಿಂ ಹೋಟೆಲ್ ಗಳ ವಿರುದ್ಧ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ನಿರ್ಧಾರದಿಂದ ಸಾರಿಗೆ ಸಂಸ್ಥೆಯ ಬಸ್ಗಳು ಇನ್ನು ಮುಂದೆ ಈ ಹೋಟೆಲ್ಗಳಲ್ಲಿ ನಿಲ್ಲುವುದಿಲ್ಲ. ಈ ಹೋಟೆಲ್ಗಳು ಹಿಂದೂ ಹೆಸರಿನಲ್ಲಿ ಪರವಾನಗಿಗಳನ್ನು ಹೊಂದಿವೆ. ಆದರೆ, ಅದರ ಮಾಲಿಕತ್ವ ಮುಸ್ಲಿಮರದ್ದು ಎಂದು ತಿಳಿದುಬಂದಿದೆ.
ಅಹಮದಾಬಾದ್, ನಾಡಿಯಾಡ್, ಪಾಲನ್ಪುರ್, ಗೋದ್ರಾ, ಮೆಹ್ಸಾನಾ, ಭುಜ್, ಭರೂಚ್, ವಡೋದರಾ, ರಾಜ್ಕೋಟ್ ಮತ್ತು ಇತರ ಹೋಟೆಲ್ಗಳು ಪಟ್ಟಿಯಲ್ಲಿವೆ.27 ಹೋಟೆಲ್ಗಳ ಪಟ್ಟಿಯಲ್ಲಿ ಹಿಂದೂ ದೇವರ ಹೋಟೆಲ್ ಹೆಸರುಗಳನ್ನು ಸಹ ಸೇರಿಸಲಾಗಿದೆ.ವಾಸ್ತವವಾಗಿ, ಮುಸ್ಲಿಮರ ಒಡೆತನದ ಕೆಲವು ಹೋಟೆಲ್ಗಳು ಹಿಂದೂ ಹೆಸರುಗಳನ್ನು ಹೊಂದಿವೆ. ಭುಜ್-ಧ್ರಗಂಧ್ರ-ಅಹಮದಾಬಾದ್ ಮಾರ್ಗದಲ್ಲಿರುವ ಹೋಟೆಲ್ ಶಿವಶಕ್ತಿಯ ಮಾಲೀಕರು ಮುಸ್ಲಿಮರು. ಹೋಟೆಲ್ಗೆ ಹಿಂದೂ ದೇವರ ಹೆಸರನ್ನು ಇಡಲಾಗಿದೆ ಮತ್ತು ಹಿಂದೂ ಹೆಸರಿನಲ್ಲಿ ಅನುಮತಿ ನೀಡಲಾಗಿದೆ.ಆದರೆ, ವಾಸ್ತವದಲ್ಲಿ ಹೋಟೆಲ್ ಮಾಲೀಕರು ಮತ್ತು ವ್ಯವಸ್ಥಾಪಕರು ಮುಸ್ಲಿಮರು. ಅದೇ ರೀತಿ, ಸೂರತ್-ಅಹಮದಾಬಾದ್ ಮಾರ್ಗದಲ್ಲಿರುವ ಹೋಟೆಲ್ ತುಳಸಿ ಕೂಡ ಮುಸ್ಲಿಮರ ಒಡೆತನದಲ್ಲಿದೆ.
ಪತ್ರಕರ್ತ ನಿರ್ಣಯ್ ಕಪೂರ್ ಪ್ರಕಾರ, ಇನ್ನು ಮುಂದೆ ಈ ಹೋಟೆಲ್ಗಳಲ್ಲಿ ಜಿಎಸ್ಆರ್ಟಿಸಿ ಬಸ್ಗಳು ನಿಲ್ಲುವುದಿಲ್ಲ. ಭರ್ನಲ್ಲಿರುವ ಸೂರತ್-ಅಹಮದಾಬಾದ್ ಮಾರ್ಗದಲ್ಲಿರುವ ಹೋಟೆಲ್ ಮಾರುತಿಗೂ ಅನುಮತಿ ನಿರಾಕರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.