ನವದೆಹಲಿ: 76ನೇ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳಿಂದ ಒಟ್ಟು 26 ಟ್ಯಾಬ್ಲೋಗಳು ದೇಶದ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಒಳಗೊಳ್ಳುವಿಕೆಯನ್ನು ಪ್ರಸ್ತುತಪಡಿಸಲಿವೆ. ಈ ಬಾರಿಯ ಟ್ಯಾಬ್ಲೋಗಳ ಥೀಮ್ ‘ಸ್ವರ್ಣ ಭಾರತ: ವಿರಾಸತ್ ಔರ್ ವಿಕಾಸ್’ ಎಂಬುದಾಗಿರಲಿದೆ.
ಈ ಪೆರೇಡ್ನಲ್ಲಿ 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಟ್ಯಾಬ್ಲೋಗಳು, ಜೊತೆಗೆ 10 ಸಚಿವಾಲಯಗಳು ಮತ್ತು ಇಲಾಖೆಗಳು ಟ್ಯಾಬ್ಲೋಗಳು ಇರಲಿವೆ. ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ಥೀಮ್ನೊಂದಿಗೆ ಇರುತ್ತವೆ. ಈ ಟ್ಯಾಬ್ಲೋಗಳು ಭಾರತದ ವೈವಿಧ್ಯಮಯ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಈ ವರ್ಷದ ಪೆರೇಡ್ನ ವಿಶಿಷ್ಟ ವೈಶಿಷ್ಟ್ಯವೆಂದರೆ ‘ಶಶಕ್ತ್ ಔರ್ ಸುರಕ್ಷಿತ್ ಭಾರತ್’ ಎಂಬ ಥೀಮ್ನೊಂದಿಗೆ ತ್ರಿ-ಸೇವೆಗಳ ಟ್ಯಾಬ್ಲೋ ಗಣರಾಜ್ಯೋತ್ಸವದ ಪೆರೇಡ್ನಲ್ಲಿ ಭಾಗವಹಿಸುತ್ತದೆ. ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ನ ಏರ್ ಕಮೋಡೋರ್ ಮನೀಶ್ ಸಭರ್ವಾಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಸಶಸ್ತ್ರ ಪಡೆಗಳಲ್ಲಿ ಜಂಟಿ ಮತ್ತು ಏಕೀಕರಣದ ಪರಿಕಲ್ಪನಾ ದೃಷ್ಟಿಕೋನವನ್ನು ಪ್ರದರ್ಶಿಸುತ್ತದೆ, ರಾಷ್ಟ್ರೀಯ ಭದ್ರತೆ ಮತ್ತು ಕಾರ್ಯಾಚರಣೆಯ ಶ್ರೇಷ್ಠತೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.
ಈ ನಡುವೆ, ಭಾರತ ಹವಾಮಾನ ಇಲಾಖೆ (IMD) ತನ್ನ ಮೊದಲ ಗಣರಾಜ್ಯ ಟ್ಯಾಬ್ಲೋವನ್ನು ಸಹ ಪ್ರದರ್ಶಿಸಲಿದೆ. ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಡಾ. ಎಂ. ರವಿಚಂದ್ರನ್ ಈ ಬಗ್ಗೆ ಮಾಹಿತಿ ನಿಡಿದ್ದು, ಕಳೆದ 150 ವರ್ಷಗಳ ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಜನರಿಗೆ ತೋರಿಸಲು ಐಎಂಡಿಗೆ ಇದು ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದರು.
ಇತರ ಸ್ತಬ್ಧಚಿತ್ರಗಳ ಜೊತೆಗೆ, ಸಂಸ್ಕೃತಿ ಸಚಿವಾಲಯದ ಸ್ತಬ್ಧಚಿತ್ರವು ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸೃಜನಶೀಲತೆಯನ್ನು ಆಚರಿಸುತ್ತದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ‘ವಿರಾಸತ್ ಭಿ, ವಿಕಾಸ್ ಭಿ’ ಮಂತ್ರದಿಂದ ಪ್ರೇರಿತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.