ಪ್ರಯಾಗ್ರಾಜ್: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಇಂದು ಮಹಾಕುಂಭ 2025 ಕ್ಕೆ ಮೀಸಲಾಗಿರುವ ಆಕಾಶವಾಣಿಯ ಕುಂಭವಾಣಿ ಚಾನೆಲ್ಗೆ ಚಾಲನೆ ನೀಡಲಾಯಿತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಚಾನೆಲ್ಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಕುಂಭವಾಣಿ ಜನಪ್ರಿಯತೆಯ ಹೊಸ ಎತ್ತರವನ್ನು ತಲುಪುವುದಲ್ಲದೆ, ಅನೇಕ ಜನರು ತಮ್ಮ ಬಯಕೆಯ ಹೊರತಾಗಿಯೂ, ಭೌತಿಕವಾಗಿ ಈ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದ ದೂರದ ಹಳ್ಳಿಗಳಿಗೆ ಮಹಾಕುಂಭದ ಉತ್ಸಾಹವನ್ನು ವಿಸ್ತರಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೂರದ ಸಮುದಾಯಗಳಿಗೆ ಮಹಾಕುಂಭದ ಬಗ್ಗೆ ಎಲ್ಲಾ ಸಂಬಂಧಿತ ಮಾಹಿತಿಯನ್ನು ತಲುಪಿಸಲು ಈ ಚಾನೆಲ್ ಪ್ರಮುಖ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಇಂತಹ ಪ್ರಯತ್ನಗಳು ದೂರದ ಪ್ರದೇಶಗಳಲ್ಲಿರುವವರು ಮಹಾಕುಂಭದ ಶ್ರೇಷ್ಠತೆಯನ್ನು ಅನುಭವಿಸಲು ಮತ್ತು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.
ಕುಂಭ ಮಂಗಲ್ ಧುನ್ ಅನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಉದ್ಘಾಟಿಸಿದರು.
ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಗವಹಿಸಿ, ರೇಡಿಯೋ ಚಾನೆಲ್ ಅನ್ನು ಉದ್ಘಾಟಿಸಿದ್ದಕ್ಕಾಗಿ ಮುಖ್ಯಮಂತ್ರಿಗೆ ಕೃತಜ್ಞತೆ ಸಲ್ಲಿಸಿದರು.
ಪ್ರಸಾರ ಭಾರತಿ ಅಧ್ಯಕ್ಷ ನವನೀತ್ ಕುಮಾರ್ ಸೆಹಗಲ್ ಮಾತನಾಡಿ, ದೂರದರ್ಶನದ ಮೂಲಕ ಮಹಾಕುಂಭದ ನೇರ ಪ್ರಸಾರ ಮತ್ತು ಆಕಾಶವಾಣಿಯ ಮೂಲಕ ನೇರ ಪ್ರಸಾರಕ್ಕಾಗಿ ಪ್ರಸಾರ ಭಾರತಿ ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ ಎಂದು ಅವರು ಹೇಳಿದರು. ಪ್ರಸಾರಕ್ಕಾಗಿ 40 ಕ್ಕೂ ಹೆಚ್ಚು ಹೈ-ರೆಸಲ್ಯೂಶನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದರು. ಈ ಬಾರಿ ಭವ್ಯ ಕಾರ್ಯಕ್ರಮದ ಪಕ್ಷಿನೋಟವನ್ನು ತೋರಿಸಲು ಹೆಲಿಕ್ಯಾಮ್ಗಳನ್ನು ಬಳಸಲಾಗುವುದು ಎಂದು ಸೆಹಗಲ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.