ನವದೆಹಲಿ: ಬಾಂಗ್ಲಾದೇಶದ ಹಿಂದೂಯೇತರ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರ ಗುಂಪು ಕೋಲ್ಕತ್ತಾದ ಮುಕುಂದಪುರ ಪ್ರದೇಶದಲ್ಲಿ ಪ್ರತಿಭಟನೆಯನ್ನು ನಡೆಸುತ್ತಿದೆ.
ಪ್ರತಿಭಟನಾಕಾರರು ಆಸ್ಪತ್ರೆಗೆ ಮನವಿ ಪತ್ರವನ್ನು ಸಲ್ಲಿಸಿ, “ದೇಶ ಮೊದಲು ತತ್ವವನ್ನು ಅಳವಡಿಸಿಕೊಳ್ಳಿ. ನಮ್ಮ ಸಹೋದರ ಸಹೋದರಿಯರನ್ನು ಅಲ್ಲಿ ಚಿತ್ರಹಿಂಸೆ ನೀಡಿ ಕೊಲ್ಲಲಾಗುತ್ತಿದೆ. ಹೀಗಾಗಿ, ಹಿಂದೂ ಅಲ್ಲದ ಬಾಂಗ್ಲಾದೇಶಿಗಳಿಗೆ ಯಾವುದೇ ವೈದ್ಯಕೀಯ ಚಿಕಿತ್ಸೆಯನ್ನು ನೀಡಬಾರದು” ಎಂದಿದೆ.
“ನಮ್ಮ ರಾಷ್ಟ್ರ, ತ್ರಿವರ್ಣದ ಗೌರವಕ್ಕಾಗಿ ನಾವು ನಮ್ಮ ನೈತಿಕತೆ ಮತ್ತು ವ್ಯವಹಾರವನ್ನು ಬದಿಗಿಡುವ ಸಮಯ ಇದು” ಎಂದಿದೆ.
“ಬಾಂಗ್ಲಾದೇಶದಲ್ಲಿ ನಮ್ಮ ಅಲ್ಪಸಂಖ್ಯಾತ ಹಿಂದೂ ಸಹೋದರ ಸಹೋದರಿಯರಿಗೆ ಏನಾಗುತ್ತಿದೆ ಎಂಬುದರ ಬಗ್ಗೆ ನಮಗೆ ನೋವಾಗಿದೆ. ಅವರನ್ನು ಚಿತ್ರಹಿಂಸೆ ನೀಡಿ ಕೊಲ್ಲಲಾಗುತ್ತಿದೆ. ಇದನ್ನು ನಿಲ್ಲಿಸಬೇಕು. ರಾಷ್ಟ್ರವು ಯಾವಾಗಲೂ ಮೊದಲು ಬರುತ್ತದೆ” ಎಂದು ಗುಂಪಿನ ಸದಸ್ಯರಾದ ನಾರಾಯಣ್ ಚಟರ್ಜಿಯವರು ಹೇಳಿದ್ದಾರೆ.
‘ಸೆಲ್ಯೂಟ್ ತಿರಂಗಾ’ ಎಂಬ ಬ್ಯಾನರ್ನಡಿಯಲ್ಲಿ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಎಲ್ಲಾ ಖಾಸಗಿ ಆಸ್ಪತ್ರೆಗಳ ಮುಂದೆ ನಡೆಸಲು ಪ್ರತಿಜ್ಞೆ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.