ಚೆನ್ನೈ: 1998 ರ ಕೊಯಂಬತ್ತೂರು ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ಎಸ್ ಎ ಬಾಷಾ 84 ನೇ ವಯಸ್ಸಿನಲ್ಲಿ ಸೋಮವಾರ ನಿಧನನಾಗಿದ್ದಾನೆ ಎಂದು ಆತ ಚಿಕಿತ್ಸೆ ಪಡೆಯುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಈತ ಕೊಯಂಬತ್ತೂರಿನ PSG ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.
ಬಾಷಾ ಅಲ್-ಉಮ್ಮಾ ಸಂಘಟನೆಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಮತ್ತು 58 ಜನರ ಸಾವಿಗೆ ಕಾರಣವಾದ ಮತ್ತು 231 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದ ಕೊಯಂಬತ್ತೂರು ಸ್ಫೋಟಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಶಿಕ್ಷೆಗೊಳಗಾಗಿದ್ದ. ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿಯವರ ಭೇಟಿಗೂ ಮುಂಚಿತವಾಗಿ ನಗರವನ್ನು ಗುರಿಯಾಗಿಸಿ ಸರಣಿ ಬಾಂಬ್ ಸ್ಫೋಟಗಳನ್ನು ನಡೆಸಲಾಗಿತ್ತು. ಅಡ್ವಾಣಿಯವರ ಹತ್ಯೆಗೆ ಸಂಚು ರೂಪಿಸಿದ್ದ ಮತ್ತು ದಾಳಿಗೆ ಗಮನಾರ್ಹ ಪ್ರಮಾಣದ ಸ್ಫೋಟಕಗಳನ್ನು ವ್ಯವಸ್ಥೆ ಮಾಡಿದ್ದ ಆರೋಪ ಬಾಷಾ ಮೇಲಿತ್ತು.
14 ಫೆಬ್ರವರಿ 1998 ರ ಘಟನೆಗಳ ನಂತರ ಬಾಷಾ ಜೀವಾವಧಿ ಶಿಕ್ಷೆಯನ್ನು ಈತ ಅನುಭವಿಸುತ್ತಿದ್ದ, ಇತ್ತೀಚೆಗಷ್ಟೇ ಅವನಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಪೆರೋಲ್ ನೀಡಲಾಗಿತ್ತು.
ಅವರ ಸಾವಿನ ನಂತರ, ಅವರ ಕುಟುಂಬವು ದಕ್ಷಿಣ ಉಕ್ಕಡಂನ ರೋಸ್ ಗಾರ್ಡನ್ನಿಂದ ಸ್ಥಳೀಯ ಮಸೀದಿಗೆ ಅಂತ್ಯಕ್ರಿಯೆಯ ಮೆರವಣಿಗೆಯನ್ನು ನಡೆಸಿದೆ.
ಮೆರವಣಿಗೆಗೆ ಅವಕಾಶ ನೀಡುವ ಯೋಜನೆಗೆ ಬಿಜೆಪಿ ನಾಯಕರಿಂದ ಖಂಡನೆ ವ್ಯಕ್ತವಾಗಿದೆ. ಪಕ್ಷದ ವಕ್ತಾರ ನಾರಾಯಣನ್ ತಿರುಪತಿ ಅವರು “ತಮಿಳುನಾಡು ಪೊಲೀಸರು ಈ ಮೆರವಣಿಗೆಗೆ ಅವಕಾಶ ನೀಡಬಾರದು, ಏಕೆಂದರೆ ಆತ ಅಪರಾಧಿ, ಭಯೋತ್ಪಾದಕ, ಕೊಲೆಗಾರನನ್ನು ಹುತಾತ್ಮ ಎಂದು ಶ್ಲಾಘಿಸಿದರೆ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತದೆ” ಎಂದಿದ್ದಾರೆ.
ಆದರೂ ಮಂಗಳವಾರ ಆತನ ಅಂತ್ಯಕ್ರಿಯೆ ವೇಳೆ ಅನೇಕರು ನೆರೆದಿದ್ದರು ಮತ್ತು ಪೋಸ್ಟರ್ಗಳನ್ನು ಹಿಡಿದು ಆತನನ್ನು ಹುತಾತ್ಮ ಎಂದು ಬಿಂಬಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.