ಲಕ್ನೋ: ಸಂಭಾಲ್ ನಂತರ, ಮಂಗಳವಾರ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಮತ್ತೊಂದು ದೇವಾಲಯ ಪತ್ತೆಯಾಗಿದೆ.
ವಾರಣಾಸಿಯ ವಸತಿ ಪ್ರದೇಶದಲ್ಲಿ ಬೀಗ ಹಾಕಿದ ಸ್ಥಿತಿಯಲ್ಲಿ ದೇವಾಲಯ ಪತ್ತೆಯಾಗಿದೆ. ದೇವಸ್ಥಾನದ ಸುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಾರಣಾಸಿಯ ಮುನ್ಸಿಪಲ್ ಕಮಿಷನರ್ ಹೇಳಿದ್ದಾರೆ
ವರದಿಗಳ ಪ್ರಕಾರ, ಸನಾತನ ರಕ್ಷಕ ದಳ ಎಂಬ ಹಿಂದೂ ಸಂಘಟನೆಯು ದೇವಾಲಯವು 250 ವರ್ಷಗಳಷ್ಟು ಹಳೆಯದಾಗಿದೆ ಮತ್ತು 40 ವರ್ಷಗಳಿಂದ ಮುಚ್ಚಲ್ಪಟ್ಟಿದೆ ಎಂದು ಹೇಳಿಕೊಂಡಿದೆ. ಅದಕ್ಕೂ ಮೊದಲು ದೇವಸ್ಥಾನದಲ್ಲಿ ನಿತ್ಯ ಪ್ರಾರ್ಥನೆ ನಡೆಯುತ್ತಿತ್ತು ಎಂದಿದೆ
ಈ ದೇವಾಲಯವು ಮದನಪುರ ಪ್ರದೇಶದಲ್ಲಿದೆ. ಪತ್ತೆಯಾದ ನಂತರ, ಬಂಗಾಳಿ ಮಹಿಳೆಯರು ದೇವಾಲಯಕ್ಕೆ ತೆರಳಿ ಶಂಖಗಳನ್ನು ಊದಿದರು. ಮುಸ್ಲಿಂ ಸಮುದಾಯದವರು ಬೀದಿಗಿಳಿದಿದ್ದರೂ ಪೊಲೀಸರು ಸಮಾಧಾನಪಡಿಸಿದರು.
ಈ ಬೆಳವಣಿಗೆಯ ಕೆಲವು ಗಂಟೆಗಳ ನಂತರ, ಸಂಭಾಲ್ನಲ್ಲಿ ಎರಡನೇ ದೇವಾಲಯ ಪತ್ತೆಯಾಗಿದೆ. ಮೊದಲನೆಯದು ಡಿಸೆಂಬರ್ 14 ರಂದು ಖಗ್ಗುಸರೈ ಪ್ರದೇಶದಲ್ಲಿ ಪತ್ತೆಯಾಗಿದ್ದರೆ, ಎರಡನೆಯದು ಹಯಾತ್ ನಗರ ಪ್ರದೇಶದಲ್ಲಿ ಕಂಡುಬಂದಿದೆ.
ಈ ಎರಡೂ ದೇವಾಲಯಗಳು ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ನೆಲೆಗೊಂಡಿವೆ ಮತ್ತು ಅವು ಪರಸ್ಪರ 2 ಕಿಲೋಮೀಟರ್ ದೂರದಲ್ಲಿವೆ. 1978 ರ ಗಲಭೆಗಳಿಂದ ಹಿಂದೂ ಕುಟುಂಬಗಳು ವಲಸೆ ಬಂದ ಕಾರಣ ದೇವಾಲಯಗಳನ್ನು ಮುಚ್ಚಲಾಯಿತು ಎನ್ನಲಾಗಿದೆ.
ನಿನ್ನೆ, ಮೊದಲು ಪತ್ತೆಯಾದ ಶಿವ-ಹನುಮಾನ್ ದೇವಾಲಯದ ಬಾವಿಯಲ್ಲಿ ಹಿಂದೂ ದೇವರುಗಳ ಮೂರು ಹಾನಿಗೊಂಡ ಶಿಲ್ಪಗಳು ಕಂಡುಬಂದಿವೆ. ಈ ಪ್ರತಿಮೆಗಳು ಗಣೇಶ, ಕಾರ್ತಿಕೇಯ ಮತ್ತು ಪಾರ್ವತಿ ದೇವಿಯೆಂದು ನಂಬಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.