ನ್ಯೂಯಾರ್ಕ್: ಆಲ್ಫಾಬೆಟ್ನ್ನು ಸಾರ್ವಜನಿಕ ವ್ಯಾಪಾರ ಕಂಪಯನ್ನಾಗಿ ನೋಂದಾಯಿಸಿದ ಗೂಗಲ್, ಸದ್ಯ ಸಂಪೂರ್ಣ ಮಾಲೀಕತ್ವದ ಕಾರ್ಯ ನಿರ್ವಹಿಸುತ್ತಿದೆ. ಅದು abcdefghijklmnopqrstuvwxyz.com ಎಂಬ ಹೊಸ ಡೊಮೇನ್ ಹೆಸರನ್ನು ಖರೀದಿಸಿದೆ. ಅದು ಸದ್ಯ ಎಲ್ಲೂ ಅಳವಡಿಸಲಾಗಿಲ್ಲ.
ಡೊಮೇನ್ ಡಾಟಾಬೇಸ್ ಹೂಈಸ್ ಪ್ರಕಾರ ಅಲ್ಫಾಬೆಟ್ ಡೊಮೇನ್ನ್ನು ಆಗಸ್ಟ್ 9, 1999ರಂದು ನೋಂದಣಿ ಮಾಡಲಾಗಿದ್ದು, ಅ.5ರಂದು ಅಪ್ಡೇಟ್ ಮಾಡಲಾಗಿದೆ. ಆದರೆ ಡೋಮೇನ್ ಖರೀದಿಗೆ ತಗುಲಿದ ವೆಚ್ಚದ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.
ಈ ದೀರ್ಘವಾದ ಡೊಮೇನ್ ಹೆಸರನ್ನು ಸಕ್ರಿಯವಾಗಿ ಬಳಸಿಕೊಳ್ಳುವ ಗೂಗಲ್ನ ಉದ್ದೇಶ ಮಾತ್ರ ಅಸ್ಪಷ್ಟವಾಗಿ ಉಳಿದಿದೆ. ಆಲ್ಫಾಬೆಟ್.ಕಾಂ ಇದರ ಹಕ್ಕು ಬಿಎಂಡಬ್ಲ್ಯೂ ಕಂಪೆನಿ ಹೊಂದಿರುವುದರಿಂದ ಈ ಡೊಮೇನ್ನ್ನು ಸದ್ಯ ಗೂಗಲ್ ಬಳಸುತ್ತಿಲ್ಲ. ಬಿಎಂಡಬ್ಲ್ಯೂ ಆಲ್ಪಾಬೆಟ್ ಅಂಗಸಂಸ್ಥೆಯನ್ನು ಹೊಂದಿದ್ದು, ಅದು 18 ರಾಷ್ಟ್ರಗಳಲ್ಲಿ 5,30,000 ವಾಹನ ಮಾರಾಟಕ್ಕೆ ಕಂಪೆನಿಗಳಿಗೆ ಸೇವೆಗಳನ್ನು ಒದಗಿಸುತ್ತಿದೆ. ಆಲ್ಫಾಬೆಟ್ ಎಂಬ ಮಾತೃ ಸಂಸ್ಥೆಯ ಹೆಸರಿನಲ್ಲಿ ಯಾವುದೇ ಉತ್ಪನ್ನ ಅಥವಾ ಬ್ರ್ಯಾಂಡ್ಗಳನ್ನು ನಿರ್ಮಿಸುವ ಇಲ್ಲವೇ ಮಾರಾಟ ಮಾಡುವುದಿಲ್ಲ ಎಂದು ಗೂಗಲ್ ತಿಳಿಸಿದೆ.
ಗೂಗಲ್ನ ಹೊಸ ಕಂಪೆನಿ ಅಲ್ಫಾಬೆಟ್ನ ಅಧಿಕೃತ ವೆಬ್ ವಿಳಾಸ abc.xyz ಆಗಿದ್ದು, ಅ.2ರಂದು ಕಂಪೆನಿಯ ಮರು ಸಂಘನೆ ಕಾರ್ಯ ಪೂರ್ಣಗೊಂಡಿದೆ ಎಂದು ಗೂಗಲ್ ತಿಳಿಸಿದೆ. ಯುಎಸ್ನಲ್ಲಿ ’ಅಲ್ಫಾಬೆಟ್’ ವ್ಯಾಪಾರ ಮುದ್ರೆ ನೋಂದಣಿ (trademark registration) ಹೊಂದಿರುವ 103 ಕಂಪೆನಿಗಳಿವೆ ಎಂದು ಯುಎಸ್ನ ಪೇಟೆಂಟ್ ಮತ್ತು ವ್ಯಾಪಾರಮುದ್ರೆ ಕಚೇರಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.