ತಿರುವನಂತಪುರಂ: ಕೇರಳದ ತೆಕ್ಕಡಿಯಲ್ಲಿರುವ ಕಾಶ್ಮೀರಿ ಕರಕುಶಲ ಅಂಗಡಿಯೊಂದರ ಮಾಲೀಕರು ಇಸ್ರೇಲಿನ ದಂಪತಿಗೆ ತಮ್ಮ ವಸ್ತುಗಳನ್ನು ಮಾರಾಟ ಮಾಡಲು ನಿರಾಕರಿಸಿದ ಘಟನೆ ನಡೆದಿದೆ. ಆದರೆ ಘಟನೆ ವಿವಾದ ಪಡೆಯುತ್ತಿದ್ದಂತೆ ಅಂಗಡಿ ಮಾಲೀಕರು ಕ್ಷಮೆಯಾಚನೆ ಮಾಡಿದ್ದಾರೆ. ಆದರೂ ಕೆಲದಿನಗಳ ಮಟ್ಟಿಗೆ ಅಂಗಡಿಯನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಕುಮಳಿ ಪೇಟೆ ಸಮೀಪದ ಅನವಾಚಲದಲ್ಲಿರುವ ಇನ್ಕ್ರೆಡಿಬಲ್ ಕ್ರಾಫ್ಟ್ಸ್ನಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ.
ವರದಿಗಳ ಪ್ರಕಾರ, ಅಂಗಡಿಯು ಒಬ್ಬ ಸ್ಥಳೀಯ ಮತ್ತು ಇಬ್ಬರು ಕಾಶ್ಮೀರಿಗರ ಒಡೆತನದಲ್ಲಿದೆ. ಬುಧವಾರ, ಇಸ್ರೇಲಿ ಪ್ರವಾಸಿ ದಂಪತಿ ಅಂಗಡಿಗೆ ಬಂದು ಬಟ್ಟೆ ಖರೀದಿಸುವ ಸಲುವಾಗಿ ಬಟ್ಟೆಗಳನ್ನು ನೋಡುತ್ತಿದ್ದರು. ಈ ವೇಳೆ ಹಿಬ್ರೂ ಭಾಷೆಯಲ್ಲಿ ಸಂಭಾಷಣೆ ನಡೆಸಿದ್ದಾರೆ. ಇದನ್ನು ಕೇಳಿಸಿಕೊಂಡ ಕಾಶ್ಮೀದರ ಅಹಮ್ಮದ್ ರಾಥರ್ ಮಹಿಳೆಯ ಬಳಿ ಆಕೆಯ ರಾಷ್ಟ್ರೀಯತೆಯ ಬಗ್ಗೆ ವಿಚಾರಿಸಿದ್ದಾನೆ. ಅವಳು ಇಸ್ರೇಲ್ನಿಂದ ಬಂದಿದ್ದೇವೆ ಎಂದ ಕೂಡಲೇ ನಿಮಗೆ ನಾವು ವಸ್ತುಗಳನ್ನು ಮಾರಾಟ ಮಾಡುವುದಿಲ್ಲ ಹೋಗಿ ಎಂದು ಕಟುವಾಗಿ ನುಡಿದಿದ್ದಾನೆ.
ಆದರೆ ಮಹಿಳೆಯ ಪತಿ ಈ ಬಗ್ಗೆ ವ್ಯಾಪಾರಿಗಳ ಸಂಘದ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ. ಇದರಿಂದ ಕುಪಿತಗೊಂಡ ಅಹಮ್ಮದ್ ರಾಥರ್ ಕ್ಷಮೆಯಾಚನೆ ಮಾಡಿದ್ದಾನೆ.
ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. “ನಾನು ತಪ್ಪು ಮಾಡಿದ್ದೇನೆ ಮತ್ತು ನಿಮಗೆ ಉತ್ಪನ್ನಗಳನ್ನು ಮಾರಾಟ ಮಾಡದಿದ್ದಕ್ಕಾಗಿ ಕ್ಷಮಿಸಿ” ಎಂದು ರಾಥರ್ ಹೇಳಿದ್ದಾನೆ.
“ನೀವು ಭಾರತೀಯರಾಗಿದ್ದಾರೆ ಮತ್ತು ಎಲ್ಲಾ ಧರ್ಮಗಳನ್ನು ಗೌರವಿಸುವ ಭಾರತೀಯ ಮೌಲ್ಯವನ್ನು ಮೈಗೂಡಿಸಿಕೊಳ್ಳಿ” ಎಂದು ಅಂಗಡಿಯವರಿಗೆ ಇಸ್ರೇಲ್ ದಂಪತಿ ಪಾಠ ಮಾಡಿದ್ದಾರೆ. ಆದರೆ ಆತನ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಆದರೆ ಘಟನೆಯ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ ಪೊಲೀಸರು ಬಂದು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅಂಗಡಿಯನ್ನು ನಾಲ್ಕು ದಿನ ಬಂದ್ ಮಾಡಿಸಿದ್ದಾರೆ.
Israeli Couple Humiliated in Kerala: Kashmiri Shop Owner Forced to Apologise
An Israeli couple was insulted by a Kashmiri shop owner yesterday in Thekkady, in the Idukki district of Kerala. The couple were visiting the area and stepped into the particular shop owned by the… pic.twitter.com/De58My8qot
— Anand #IndianfromSouth (@Bharatiyan108) November 14, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.