ತಿರುವನಂತಪುರಂ: ವಕ್ಫ್ ವಿವಾದ ದೇಶದಲ್ಲಿ ಬಾರೀ ಸಂಚಲನವನ್ನು ಸೃಷ್ಟಿಸಿದೆ. ಕರ್ನಾಟಕದಲ್ಲಿ ಅದರ ಒಂದೊಂದೇ ಕೃತ್ಯಗಳು ಹೊರಬಂದು ವಿವಾದವೆಬ್ಬಿಸಿರುವಂತೆ ಅದರ ಮತ್ತೊಂದು ಕರ್ಮಕಾಂಡ ನೆರೆ ರಾಜ್ಯ ಕೇರಳದಲ್ಲಿ ಮುನ್ನಲೆಗೆ ಬಂದಿದೆ.
ಕೇರಳದ ಎರ್ನಾಕುಲಂ ಜಿಲ್ಲೆಯ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಮುನಂಬಂ ಗ್ರಾಮವನ್ನು ಸಂಪೂರ್ಣ ವಕ್ಫ್ ಆಸ್ತಿ ಎಂದು ಉಲ್ಲೇಖ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇದರ ವಿರುದ್ಧ ಮನೆ, ಜಮೀನು ಕಳೆದುಕೊಳ್ಳುವ ಭೀತಿಯಲ್ಲಿರುವ ಮುನಂಬಂನ 600ಕ್ಕೂ ಹೆಚ್ಚು ಕುಟುಂಬಗಳು ಹೋರಾಟ ನಡೆಸುತ್ತಿವೆ. ಈಗ ಈ ಹೋರಾಟಕ್ಕೆ ಬಲ ನೀಡುವಂತೆ ಕೇರಳದ ಚರ್ಚ್ಗಳು ಕೂಡಾ ಹೋರಾಟದ ಕಣಕ್ಕೆ ಧುಮುಕಿವೆ.
ವಕ್ಸ್ ಆಸ್ತಿ ಗದ್ದಲದ ವಿರುದ್ಧ ಭಾನುವಾರ ಕೇರಳದ 1000ಕ್ಕೂ ಹೆಚ್ಚು ಚರ್ಚ್ಗಳಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು. ಚರ್ಚ್ಗಳ ಅಧಿಕೃತ ಸಮುದಾಯ ಸಂಸ್ಥೆಯಾದ ಆಲ್ ಕೇರಳ ಕ್ಯಾಥಲಿಕ್ ಕಾಂಗ್ರೆಸ್ ಆಯೋಜಿಸಿದ್ದ ಈ ಸಭೆಯಲ್ಲಿ ಗ್ರಾಮಸ್ಥರ ಹೋರಾಟಕ್ಕೆ ಬೆಂಬಲವನ್ನೂ ಸೂಚಿಸಲಾಗಿದೆ.
ಕಂಡ ಕಂಡ ಆಸ್ತಿಗಳನ್ನು ತನ್ನದು ಎನ್ನುತ್ತಿರುವ ವಕ್ಫ್ ಮಂಡಳಿಗೆ ಕಡಿವಾಣ ಹಾಕುವ ಸಲುವಾಗಿ ಕೇಂದ್ರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾದರೆ ಪ್ರತಿಪಕ್ಷಗಳು ಇದನ್ನು ವಿರೋಧಿಸುತ್ತಿರುವುದು ದುರಾದೃಷ್ಟಕರ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.