ನವದೆಹಲಿ: ಪಕ್ಷಪಾತ ಮತ್ತು ಅಸಮರ್ಪಕ ಮಾಹಿತಿಯ ಆರೋಪದ ಮೇಲೆ ಭಾರತ ಸರ್ಕಾರವು ವಿಕಿಪೀಡಿಯಾಕ್ಕೆ ನೋಟಿಸ್ ನೀಡಿದೆ. ನೋಟಿಸ್ನಲ್ಲಿ, ಆನ್ಲೈನ್ ವಿಶ್ವಕೋಶ ಎದುರಿಸುತ್ತಿರುವ ಪಕ್ಷಪಾತ ಮತ್ತು ತಪ್ಪು ಮಾಹಿತಿಯ ಆರೋಪಗಳ ಬಗ್ಗೆ ಪ್ರಶನೆ ಮಾಡಿದೆ. ಅಲ್ಲದೇ ವಿಕಿಪೀಡಿಯಾದ ಸಂಪಾದಕೀಯ ನಿಯಂತ್ರಣವನ್ನು ಹೊಂದಿರುವ ಸಣ್ಣ ಗುಂಪಿನ ಬಗ್ಗೆಯೂ ಸಹ ಸೂಚಿಸಿದೆ.
ವಿಕಿಪೀಡಿಯಾವನ್ನು ಮಧ್ಯವರ್ತಿಯಾಗಿ ಪರಿಗಣಿಸುವ ಬದಲು ಪ್ರಕಾಶಕನಾಗಿ ಏಕೆ ಪರಿಗಣಿಸಬಾರದು ಎಂದು ಕೇಂದ್ರವು ಪ್ರಶ್ನಿಸಿದೆ.
“ಭಾರತ ಸರ್ಕಾರವು ವಿಕಿಪೀಡಿಯಾಗೆ ನೋಟಿಸ್ ನೀಡಿದೆ. ವಿಕಿಪೀಡಿಯಾದಲ್ಲಿನ ಪಕ್ಷಪಾತ ಮತ್ತು ಅಸಮರ್ಪಕತೆಯ ಮಾಹಿತಿಯ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ, ಸಂಪಾದಕೀಯ ನಿಯಂತ್ರಣ ಹೊಂದಿರುವ ಸಣ್ಣ ಗುಂಪನ್ನು ಸಹ ನೋಟಿಸ್ನಲ್ಲಿ ಉಲ್ಲೇಖ ಮಾಡಲಾಗಿದೆ ಮತ್ತು ವಿಕಿಪೀಡಿಯಾವನ್ನು ಮಧ್ಯವರ್ತಿ ಬದಲಿಗೆ ಪ್ರಕಾಶಕ ಎಂದು ಏಕೆ ಪರಿಗಣಿಸಬಾರದು ಎಂದು ಕೇಳಿದೆ” ಎಂದು ಸುದ್ದಿ ಸಂಸ್ಥೆ ತಿಳಿಸಿದೆ.
ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ ಪಕ್ಷಪಾತ ಮತ್ತು ಅಸಮರ್ಪಕತೆಯ ದೂರುಗಳ ಕುರಿತು ಮಾತನಾಡಿದ ಬಿಜೆಪಿ ನಾಯಕ ಮತ್ತು ಸಚಿವ ಗಿರಿರಾಜ್ ಸಿಂಗ್, “ವಿಕಿಪೀಡಿಯಾ ಸಂಪೂರ್ಣ ಪಕ್ಷಪಾತಿಯಾಗಿದೆ, ಕನ್ಹಯ್ಯ ಟೈಲರ್ ಕೊಲ್ಲಲ್ಪಟ್ಟಾಗ ಮತ್ತು ಎಲ್ಲಾ ಮೌಲಾನಾಗಳು ವಕ್ಫ್ ತಿದ್ದುಪಡಿಯ ಬಗ್ಗೆ ಅಪಪ್ರಚಾರ ಮಾಡಿದ ವಿಷಯ ವಿಕಿಪೀಡಿಯಾದಲ್ಲಿ ಎಲ್ಲಿತ್ತು?. ವಿಕಿಪೀಡಿಯಾದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾನು ಸರ್ಕಾರವನ್ನು ನಂಬುತ್ತೇನೆ” ಎಂದಿದ್ದಾರೆ.
ಸುದ್ದಿ ಸಂಸ್ಥೆ ಎಎನ್ಐ ಬಗ್ಗೆ ಸುಳ್ಳು ಮಾಹಿತಿ ನೀಡಿರುವುದಕ್ಕೆ ಸಂಬಂಧಿಸಿದಂತೆ ವಿಕಿಪೀಡಿಯಾ ನ್ಯಾಯಾಂಗದ ವಿಚಾರಣೆಯನ್ನು ಪ್ರಸ್ತುತ ಎದುರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.