ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ರಾಷ್ಟ್ರಪತಿ ಭವನದಲ್ಲಿ ಭಾರತೀಯ ವಿಮಾನಯಾನ ಕ್ಷೇತ್ರದ ಮಹಿಳಾ ಸಾಧಕರೊಂದಿಗೆ ಸಂವಾದ ನಡೆಸಿದರು. ಜನರೊಂದಿಗೆ ಆಳವಾದ ಸಂಪರ್ಕವನ್ನು ಸ್ಥಾಪಿಸುವ ಮತ್ತು ಅವರ ಕೊಡುಗೆಗಳನ್ನು ಗುರುತಿಸುವ ಗುರಿಯನ್ನು ಹೊಂದಿರುವ “ಜನರೊಂದಿಗೆ ರಾಷ್ಟ್ರಪತಿ” ಉಪಕ್ರಮದ ಅಡಿಯಲ್ಲಿ ಈ ಸಂವಾದ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಭಾರತದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ವಿವಿಧ ಕಾರ್ಯಾಚರಣೆ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಏರ್ ಟ್ರಾಫಿಕ್ ಕಂಟ್ರೋಲರ್ಗಳಲ್ಲಿ 15 ಪ್ರತಿಶತ ಮಹಿಳೆಯರು ಇದ್ದಾರೆ. ಅಂತೆಯೇ 11 ಪ್ರತಿಶತ ವಿಮಾನ ರವಾನೆದಾರರು ಮಹಿಳೆಯರಾಗಿದ್ದಾರೆ ಮತ್ತು 9 ಪ್ರತಿಶತ ಏರೋಸ್ಪೇಸ್ ಎಂಜಿನಿಯರ್ಗಳು ಮಹಿಳೆಯರು ಎಂದು ಅವರು ಉಲ್ಲೇಖಿಸಿದರು.
ಕಳೆದ ವರ್ಷ ವಾಣಿಜ್ಯ ಪರವಾನಗಿ ಪಡೆದ 18 ಪ್ರತಿಶತ ಪೈಲಟ್ಗಳು ಮಹಿಳೆಯರು ಎಂದು ಅವರು ಗಮನಿಸಿದರು. ನವೀನವಾಗಿ ಯೋಚಿಸುವ ಮತ್ತು ಹೊಸ ಹಾದಿಯಲ್ಲಿ ಸಾಗುವ ಧೈರ್ಯವನ್ನು ಹೊಂದಿರುವ ಎಲ್ಲಾ ಮಹಿಳಾ ಸಾಧಕರನ್ನು ಅವರು ಶ್ಲಾಘಿಸಿದರು.
ಭಾರತ ಸರ್ಕಾರದ ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನಗಳು ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಮಹಿಳೆಯರ ಪ್ರಗತಿಗೆ ಉತ್ತೇಜನ ನೀಡಿದೆ . ಈಗ ಹೆಚ್ಚು ಹೆಚ್ಚು ಮಹಿಳೆಯರು ವಾಯುಯಾನವನ್ನು ತಮ್ಮ ವೃತ್ತಿಯನ್ನಾಗಿ ಆರಿಸಿಕೊಳ್ಳುತ್ತಿದ್ದಾರೆ. ವಿಮಾನಯಾನ ಉದ್ಯಮದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದರೊಂದಿಗೆ, ಈ ಕ್ಷೇತ್ರದಲ್ಲಿ ಮುಂದುವರಿಯುವ ಸಮಾನ ಅವಕಾಶಗಳು ಸಹ ಅಗತ್ಯ ಎಂದು ಅವರು ಒತ್ತಿ ಹೇಳಿದರು.
ಶಿಕ್ಷಣ ಮತ್ತು ಸರಿಯಾದ ತರಬೇತಿಯ ಜೊತೆಗೆ ಕುಟುಂಬದ ಬೆಂಬಲವೂ ಮುಖ್ಯವಾಗುತ್ತದೆ. ಕುಟುಂಬದ ಬೆಂಬಲದ ಕೊರತೆಯಿಂದ ಅನೇಕ ಮಹಿಳೆಯರು ಉನ್ನತ ಶಿಕ್ಷಣ ಪಡೆದರೂ ತಮ್ಮ ಕನಸುಗಳನ್ನು ನನಸಾಗಿಸಲು ಸಾಧ್ಯವಾಗುತ್ತಿಲ್ಲ. ಮಹಿಳಾ ಸಾಧಕರು ಇತರ ಮಹಿಳೆಯರಿಗೆ ಮಾರ್ಗದರ್ಶಕರಾಗಬೇಕು ಮತ್ತು ಅವರ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಅವರ ಕನಸುಗಳನ್ನು ನನಸಾಗಿಸಲು ಪ್ರೋತ್ಸಾಹಿಸಬೇಕು ಎಂದು ಅವರು ಒತ್ತಾಯಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.