ನವದೆಹಲಿ: ಆಯುಷ್ಮಾನ್ ಭಾರತ್ ಯೋಜನೆಯು ಅತ್ಯುತ್ತಮ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಹೇಳಿದ್ದಾರೆ.
ಯುಎಸ್ಎಯ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ವಾರ್ಟನ್ ಬ್ಯುಸಿನೆಸ್ ಸ್ಕೂಲ್ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಜನರಿಗೆ ಆರೋಗ್ಯ ವಿಮೆ ನೀಡುವ ಉದ್ದೇಶದೊಂದಿಗೆ ತರಲಾದ ಈ ಯೋಜನೆಯು 63 ದಶಲಕ್ಷಕ್ಕೂ ಹೆಚ್ಚು ಆಸ್ಪತ್ರ ದಾಖಲಾತಿಗಳಿಗೆ ಸೇವೆ ಸಲ್ಲಿಸಿದೆ. ವ್ಯಕ್ತಿಯ ಹಿನ್ನೆಲೆ ಮತ್ತು ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಈ ಯೋಜನೆಯು ಈಗ 70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಭ್ಯವಿದೆ ಎಂದು ಅವರು ಹೇಳಿದರು.
ಡಿಜಿಟಲ್ ಮೂಲಸೌಕರ್ಯ ಕುರಿತು ಮಾತನಾಡಿದ ಸಚಿವರು, ಭಾರತದ ನಾಗರಿಕರಿಗೆ ಡಿಜಿಟಲ್ ಪ್ರವೇಶವು ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ. ಜನರು ಉಚಿತವಾಗಿ ಲಭ್ಯವಿರುವ ಡಿಜಿಟಲ್ ಮೂಲಸೌಕರ್ಯವನ್ನು ಬಳಸಿಕೊಳ್ಳದಿದ್ದರೆ ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗುತ್ತಿರಲಿಲ್ಲ. ನೇರ ಲಾಭ ವರ್ಗಾವಣೆ (ಡಿಬಿಟಿ) ಯೊಂದಿಗೆ ಭಾರತದ ಡಿಜಿಟಲ್ ಅನುಭವವು ಹೆಚ್ಚು ಪಾರದರ್ಶಕವಾಗಿದ್ದು, ವಂಚನೆ ಮುಕ್ತವಾಗಿದೆ ಎಂದಿದ್ದಾರೆ.
ಆಫ್ರಿಕನ್ ಯೂನಿಯನ್ ಅನ್ನು ಜಿ 20 ಗೆ ಸೇರಿಸುವುದನ್ನು ಹಣಕಾಸು ಸಚಿವರು ಎತ್ತಿ ತೋರಿಸಿದ್ದು, ಇದು ಭಾರತೀಯ ನಾಯಕತ್ವ ಮತ್ತು ರಾಜತಾಂತ್ರಿಕತೆಯ ಪ್ರಯತ್ನಗಳಿಂದ ಮಾತ್ರ ಸಾಧ್ಯವಾಯಿತು, ಅದು ಜಾಗತಿಕ ದಕ್ಷಿಣದ ಧ್ವನಿಗಳು ಮತ್ತು ಆಕಾಂಕ್ಷೆಗಳನ್ನು ಮುಂದಿಟ್ಟಿದೆ ಎಂದಿದ್ದಾರೆ.
ಭಾರತವು ಅತ್ಯಂತ ನಿರ್ಣಾಯಕ ಹಂತದಲ್ಲಿದೆ ಮತ್ತು 2047 ರಲ್ಲಿ 4 ‘I’ ಅವುಗಳೆಂದರೆ: ಮೂಲಸೌಕರ್ಯ, ಹೂಡಿಕೆ, ನಾವೀನ್ಯತೆ ಮತ್ತು ಒಳಗೊಳ್ಳುವಿಕೆಗಳ ಮೂಲಕ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಗುರಿ ನೆಟ್ಟಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.