ನವದೆಹಲಿ: ಮುಂಬರುವ ಭವಿಷ್ಯದಲ್ಲಿ ದೇಶದ ಎಲ್ಲಾ 8 ಕೋಟಿ ಹಾಲು ಉತ್ಪಾದಕ ರೈತರನ್ನು ಸಹಕಾರಿ ಮೂಲಸೌಕರ್ಯಕ್ಕೆ ಸಂಪರ್ಕಿಸುವ ಗುರಿಯೊಂದಿಗೆ ಭಾರತ ಎರಡನೇ ಶ್ವೇತ ಕ್ರಾಂತಿಗೆ ಸಜ್ಜಾಗುತ್ತಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಇಂದು ಹೇಳಿದ್ದಾರೆ.
ಇಂದು ಆನಂದ್ನಲ್ಲಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ವಜ್ರಮಹೋತ್ಸವ ಆಚರಣೆಯನ್ನು ಉದ್ದೇಶಿಸಿ ಮಾತನಾಡಿದ ಶಾ, ಪ್ರಸ್ತುತ ಹಾಲು ಉತ್ಪಾದಕರಲ್ಲಿ ಕೇವಲ 1.5 ಕೋಟಿ ರೈತರು ಸಹಕಾರಿ ಸಂಘಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಇನ್ನೂ ಶೋಷಣೆಯಿಂದ ಬಳಲುತ್ತಿದ್ದಾರೆ ಎಂದಿದ್ದಾರೆ.
ಭಾರತದ ಡೈರಿ ವಲಯವು ವಾರ್ಷಿಕ 6 ಪ್ರತಿಶತದ ದರದಲ್ಲಿ ಬೆಳೆಯುತ್ತಿದೆ, ಇದು ವಿಶ್ವದ ಸರಾಸರಿಗಿಂತ ಹೆಚ್ಚಾಗಿದೆ. ಡೈರಿ ಉದ್ಯಮದ ಯಶಸ್ಸು ಮತ್ತು ಹಾಲು ಉತ್ಪಾದಿಸುವ ರೈತರ ಆರ್ಥಿಕ ಉನ್ನತಿಗಾಗಿ ನಾವು ಶ್ರಮಿಸುತ್ತಿದ್ದೇವೆ ಎಂದಿದ್ದಾರೆ.
ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ 2 ಲಕ್ಷ ಸಹಕಾರಿ ಸಂಸ್ಥೆಗಳನ್ನು ಸ್ಥಾಪಿಸುವ ಬಿಜೆಪಿ ಸರ್ಕಾರದ ಯೋಜನೆಗಳನ್ನು ಶಾ ಅನಾವರಣಗೊಳಿಸಿದರು. ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಸಚಿವರು, ರಾಷ್ಟ್ರೀಯ ಗೋಕುಲ್ ಮಿಷನ್ನಂತಹ ಸರ್ಕಾರದ ಹಲವಾರು ಉಪಕ್ರಮಗಳನ್ನು ಒತ್ತಿ ಹೇಳಿದರು. ಜಾಗತಿಕ ಮಟ್ಟದಲ್ಲಿ ಭಾರತದ ಸಹಕಾರಿ ಹಾಲಿನ ಬ್ರ್ಯಾಂಡ್ಗಳ ಪ್ರಚಾರಕ್ಕಾಗಿ ಎನ್ಡಿಡಿಬಿಯನ್ನು ಸಚಿವರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಎನ್ಡಿಡಿಬಿಯ ಹಲವಾರು ರೈತ ಕೇಂದ್ರಿತ ಯೋಜನೆಗಳನ್ನು ಸಚಿವರು ಅನಾವರಣಗೊಳಿಸಿದರು ಮತ್ತು ಎನ್ಡಿಡಿಬಿಯ ಹೊಸ ಕ್ಯಾಂಪಸ್ನ್ನು ಉದ್ಘಾಟಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.