ನವದೆಹಲಿ: “ಜನರ ನ್ಯಾಯಾಲಯ” ಎಂಬಂತೆ ಸುಪ್ರೀಂಕೋರ್ಟ್ನ ಪಾತ್ರವನ್ನು ಸಂರಕ್ಷಿಸಬೇಕು ಎಂದು ಒತ್ತಿಹೇಳಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ಸಂಸತ್ತಿನಲ್ಲಿ ಸುಪ್ರೀಂಕೋರ್ಟ್ ಪ್ರತಿಪಕ್ಷಗಳ ಪಾತ್ರವನ್ನು ನಿರ್ವಹಿಸಬೇಕು ಎಂಬುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.
ನವೆಂಬರ್ 10 ರಂದು ನಿವೃತ್ತರಾಗಲಿರುವ ಸಿಜೆಐ ಚಂದ್ರಚೂಡ್ ಅವರು ದಕ್ಷಿಣ ಗೋವಾದಲ್ಲಿ ಸುಪ್ರೀಂಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಷನ್ (ಎಸ್ಸಿಎಒಆರ್ಎ) ಆಯೋಜಿಸಿದ್ದ ಅಂತರರಾಷ್ಟ್ರೀಯ ಕಾನೂನು ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದರು.
ಸುಪ್ರೀಂಕೋರ್ಟ್ನ ನ್ಯಾಯ ಮಾದರಿಯ ಪ್ರವೇಶವನ್ನು ಕಳೆದ 75 ವರ್ಷಗಳಿಂದಲೂ ಅಭಿವೃದ್ಧಿಪಡಿಸುತ್ತಾ ಬರಲಾಗಿದೆ. “ನಾವು ಎಂದಿಗೂ ಟ್ರ್ಯಾಕ್ ಕಳೆದುಕೊಳ್ಳಬಾರದು” ಎಂಬ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸುತ್ತೇವೆ ಎಂದಿದ್ದಾರೆ.
“ಸಮಾಜಗಳು ಬೆಳೆದಂತೆ ಮತ್ತು ಸಮಾಜಗಳು ಹೆಚ್ಚು ಸಮೃದ್ಧಿ ಮತ್ತು ಶ್ರೀಮಂತಿಕೆಯಿಂದ ವಿಕಸನಗೊಳ್ಳುತ್ತಿದ್ದಂತೆ, ನಾವು ದೊಡ್ಡ ವಿಚಾರಗಳನ್ನು ಮಾತ್ರ ನೋಡಬೇಕು ಎಂಬ ಗ್ರಹಿಕೆ ಇದೆ. ಆದರೆ ನಮ್ಮದು ಆ ರೀತಿಯ ನ್ಯಾಯಾಲಯ ಅಲ್ಲ. ನಮ್ಮದು ಜನತಾ ನ್ಯಾಯಾಲಯ. ಜನರ ನ್ಯಾಯಾಲಯವಾಗಿ ಸುಪ್ರೀಂ ಕೋರ್ಟ್ನ ಪಾತ್ರವನ್ನು ಭವಿಷ್ಯಕ್ಕಾಗಿ ಸಂರಕ್ಷಿಸಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದರು.
“ಕೆಲವು ತಿರುವುಗಳ ಹೊರತಾಗಿಯೂ ಸುಪ್ರೀಂಕೋರ್ಟ್ನ ಕೆಲಸವನ್ನು ಮನೆಗಳು ಮತ್ತು ಜನರ ಹೃದಯಗಳಿಗೆ ಕೊಂಡೊಯ್ಯುವ ಮೂಲಕ ನ್ಯಾಯಾಲಯದ ಪ್ರಕ್ರಿಯೆಗಳ ನೇರ ಪ್ರಸಾರವು “ಗೇಮ್ ಚೇಂಜರ್” ಆ ರೂಪುಗೊಂಡಿದೆ” ಎಂದು ಸಿಜೆಐ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.