ನವದೆಹಲಿ: “ಪಾಕಿಸ್ತಾನ್ ಜಿಂದಾಬಾದ್ ಹಿಂದೂಸ್ತಾನ್ ಮುರ್ದಾಬಾದ್” ಎಂಬ ಘೋಷಣೆಯನ್ನು ಕೂಗಿದ ಆರೋಪಿಗೆ ಮಧ್ಯಪ್ರದೇಶ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ. ಆದರೆ ಜಾಮೀನಿನ ಜೊತೆಗೆ ಆತನಿಗೆ ಒಂದಿಷ್ಟು ಷರತ್ತುಗಳನ್ನು ವಿಧಿಸಿದೆ.
ಈ ವರ್ಷ ಮೇ 17 ರಂದು ಎಫ್ಐಆರ್ ದಾಖಲಿಸಿದ ನಂತರ ಆರೋಪಿ ಫೈಜಾನ್ನನ್ನು ಪೊಲೀಸರು ಭೋಪಾಲ್ನಲ್ಲಿ ಬಂಧಿಸಿದ್ದರು ಮತ್ತು ಅಲ್ಲಿಂದ ಆತ ಬಂಧನದಲ್ಲಿದ್ದಾನೆ. ಆರೋಪಿಯು “ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದ್ದ ಮತ್ತು ಅವನ ಕೃತ್ಯವು ಸಾಮರಸ್ಯ ಮತ್ತು ರಾಷ್ಟ್ರೀಯ ಏಕೀಕರಣಕ್ಕೆ ಮಾರಕವಾಗಿದೆ” ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.
ಆರೋಪಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಮೂರ್ತಿ ದಿನೇಶ್ ಕುಮಾರ್ ಪಾಲಿವಾಲ್, ಫೈಜಾನ್ ತಿಂಗಳ ಮೊದಲ ಮತ್ತು ನಾಲ್ಕನೇ ಮಂಗಳವಾರದಂದು ವಿಚಾರಣೆಯ ಮುಕ್ತಾಯದವರೆಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನದ ನಡುವೆ ಉಪಸ್ಥಿತನಿರಬೇಕು ಎಂದಿದೆ.
ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ, ಆರೋಪಿಯು “ಪೊಲೀಸ್ ಠಾಣೆಯ ಕಟ್ಟಡದ ಮೇಲೆ ಹಾರಿಸಲಾದ ರಾಷ್ಟ್ರಧ್ವಜಕ್ಕೆ 21 ಬಾರಿ ವಂದನೆ ಸಲ್ಲಿಸಬೇಕು, ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆಯನ್ನು ಎತ್ತಬೇಕು. ಮೇಲಿನ ಷರತ್ತುಗಳನ್ನು ಜಾಮೀನು ಪತ್ರಗಳಲ್ಲಿ ಅಗತ್ಯವಾಗಿ ಅಳವಡಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಜಾಮೀನಿಗಾಗಿ 50,000 ರೂಪಾಯಿ ಬಾಂಡ್ ಇಡುವಂತೆ ಸೂಚಿಸಿದೆ.
ಆರೋಪಿಗಳು ಘೋಷಣೆ ಕೂಗುತ್ತಿರುವ ವಿಡಿಯೋ ತಮ್ಮ ಬಳಿ ಇದೆ ಎಂದು ಪ್ರಾಸಿಕ್ಯೂಷನ್ ಹೇಳಿಕೊಂಡಿತ್ತು, ಆದರೆ ನ್ಯಾಯಾಲಯದ ಮುಂದೆ ವೀಡಿಯೊವನ್ನು ಹಾಜರುಪಡಿಸದ ಹಿನ್ನೆಲೆಯ ಜಾಮೀನು ವಿಚಾರಣೆ ಹಲವಾರು ತಿಂಗಳುಗಳ ಕಾಲ ವಿಳಂಬವಾಗಿ ಕೊನೆಗೆ ಆತನಿಗೆ ಜಾಮೀನು ದೊರೆತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.