ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರನೇ ಅವಧಿಯಲ್ಲಿ ಎಂತಹ ಗುರಿಯನ್ನು ನಿಗದಿಪಡಿಸಿದ್ದಾರೆ ಎಂದರೆ ಅದು ಮೂರು ಪಟ್ಟು ಹೆಚ್ಚು ಶ್ರಮಿಸುವ ಮೂಲಕ ಮಾತ್ರ ಸಾಧಿಸಲು ಸಾಧ್ಯ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ಹೇಳಿದ್ದಾರೆ. ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರದ ಸ್ಥಾನಮಾನವನ್ನು ಪಡೆಯಬೇಕಾಗಿರುವುದು ಇಂದಿನ ಅನಿವಾರ್ಯತೆಯಾಗಿದೆ ಎಂದು ಅವರು ಹೇಳಿದರು.
“ಪ್ರಧಾನಿ ಮೋದಿ ಅವರು ಸ್ಪಷ್ಟ ಗುರಿಯನ್ನು ಹೊಂದಿದ್ದಾರೆ ಮತ್ತು ಈ ಬಾರಿ ನಾವು ಮೂರು ಪಟ್ಟು ಹೆಚ್ಚು ಕೆಲಸ ಮಾಡಬೇಕು. ಮೊದಲ ಮತ್ತು ಎರಡನೇ ಅಧಿಕಾರಾವಧಿಯಲ್ಲಿ ಮಾಡಿದ್ದಕ್ಕಿಂತ ಮೂರು ಪಟ್ಟು ಹೆಚ್ಚು ಶ್ರಮವನ್ನು ಹಾಕಬೇಕು. ಮನಸ್ಥಿತಿಯ ಬದಲಾವಣೆಯು 2047 ರ ವೇಳೆಗೆ ನಾವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬಹುದು ಎಂಬ ಭರವಸೆ ಮತ್ತು ವಿಶ್ವಾಸವನ್ನು ನೀಡುತ್ತದೆ”ಎಂದು ವೈಷ್ಣವ್ ಇಂಡಿಯನ್ ಫೌಂಡೇಶನ್ ಫಾರ್ ಕ್ವಾಲಿಟಿ ಮ್ಯಾನೇಜ್ಮೆಂಟ್ (IFQM) ತಂತ್ರಜ್ಞಾನದ ವಿಚಾರ ಸಂಕಿರಣವನ್ನು ಉದ್ದೇಶಿಸಿ ವೈಷ್ಣವ್ ಹೇಳಿದರು.
ಅಭಿವೃದ್ಧಿ ಹೊಂದಿದ ರಾಷ್ಟ್ರದ ಸ್ಥಾನಮಾನವನ್ನು ಪಡೆಯುವುದರ ಅರ್ಥವನ್ನು ವಿವರಿಸಿದ ಅವರು, “ಮೂರು ಪ್ರಮುಖ ಅಂಶಗಳು, ಮೊದಲನೆಯದು ಅತ್ಯಂತ ಒಳಗೊಂಡ ಮತ್ತು ಸಾಮರಸ್ಯದ ಸಮಾಜದ ನಿರ್ಮಾಣ, ಸಾಮಾಜಿಕ ಭೌತಿಕ ಮತ್ತು ಡಿಜಿಟಲ್ ಮೂಲವನ್ನು ಹೊಂದಿರುವುದು. ಮೂರನೆಯದು ಅಳೆಯಬಹುದಾದ ನಿಯತಾಂಕಗಳಾದ $18,000 ತಲಾ ಆದಾಯ ಸಾಧಿಸುವುದು. 2047 ರ ವೇಳೆಗೆ 30 ಟ್ರಿಲಿಯನ್ ಜಿಡಿಪಿಯನ್ನು ಪಡೆಯುವ ಗುರಿ ಬೆನ್ನಟ್ಟಿದ್ದೇವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.