ಡೆಹ್ರಾಡೂನ್: ‘ದೇವಭೂಮಿ’ ಉತ್ತರಾಖಂಡದಲ್ಲಿ ಧಾರ್ಮಿಕ ಮತಾಂತರ, ಅತಿಕ್ರಮಣ, “ಲ್ಯಾಂಡ್ ಜಿಹಾದ್ ಮತ್ತು ಥೂಕ್ (ಉಗುಳು) ಜಿಹಾದ್ಗೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭಾನುವಾರ ಹೇಳಿದ್ದಾರೆ. ಇಂತಹವುಗಳನ್ನು ತಡೆಯಲು ವಿದ್ಯಾವಂತರು ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.
ಉಧಮ್ ಸಿಂಗ್ ನಗರ್ ಜಿಲ್ಲೆಯ ಕಿಚ್ಚಾದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಉತ್ತರಾಖಂಡವು ‘ದೇವಭೂಮಿ’, ಅಲ್ಲಿ ಎಲ್ಲರೂ ಒಟ್ಟಿಗೆ ವಾಸಿಸುತ್ತಾರೆ. ಆದರೆ ಉತ್ತರಾಖಂಡದಲ್ಲಿ ಧಾರ್ಮಿಕ ಮತಾಂತರಕ್ಕೆ ಅವಕಾಶ ನೀಡುವುದಿಲ್ಲ, ಅತಿಕ್ರಮಣಕ್ಕೆ ಅವಕಾಶ ನೀಡುವುದಿಲ್ಲ, ಲ್ಯಾಂಡ್ ಜಿಹಾದ್ಗೆ ಅವಕಾಶ ನೀಡುವುದಿಲ್ಲ. ಕೆಲವರು ಉತ್ತರಾಖಂಡದಲ್ಲಿ ಸ್ಪಿಟ್ ಜಿಹಾದ್ ಮಾಡುತ್ತಿದ್ದಾರೆ, ಆದರೆ ರಾಜ್ಯದಲ್ಲಿ ಸ್ಪಿಟ್ ಜಿಹಾದ್ಗೆ ಅವಕಾಶ ನೀಡುವುದಿಲ್ಲ ಎಂದು ಧಾಮಿ ಹೇಳಿದರು.
ಸಮಾಜದಲ್ಲಿ ಕೆಟ್ಟದ್ದನ್ನು ತಡೆಯಲು ವಿದ್ಯಾವಂತರು ಮುಂದಾಗಬೇಕು, ಏನೇ ತಪ್ಪು ಮಾಡಿದರೂ ಸಹಿಸುವುದಲ್ಲ, ಉತ್ತರಾಖಂಡದಲ್ಲಿ ಇದನ್ನು ಯಾವುದೇ ಬೆಲೆ ತೆತ್ತಾದರೂ ಸಹಿಸುವ ಮಾತೇ ಇಲ್ಲ ಎಂದರು.
ಇತ್ತೀಚೆಗೆ, ಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆಯ ಖತೌಲಿ ನಿವಾಸಿಗಳಾದ ಇಬ್ಬರು ಸಹೋದರರು ನೌಶಾದ್ ಅಲಿ ಮತ್ತು ಹಸನ್ ಅಲಿ ಎಂಬುವವರನ್ನು ಟೀ ಪಾಟ್ನಲ್ಲಿ ಉಗುಳುವುದು ಮತ್ತು ಆ ಚಹಾವನ್ನು ಗ್ರಾಹಕರಿಗೆ ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ.
ನಮ್ಮ ಸರ್ಕಾರ ಕಠಿಣ ಮತ್ತು ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಧಾಮಿ ಹೇಳಿದ್ದು, ನಕಲು ವಿರೋಧಿ ಕಾನೂನು, ಗಲಭೆ ವಿರೋಧಿ ಕಾನೂನು ತರುವುದಾಗಿ ತಿಳಿಸಿದ್ದಾರೆ. ಶೀಘ್ರದಲ್ಲೇ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಸಹ ಜಾರಿಗೆ ಬರಲಿದೆ ಎಂದಿದ್ದಾರೆ.
ಉತ್ತರಾಖಂಡದ ಜನರು ಯುಸಿಸಿಗಾಗಿ ತಮ್ಮ ಸರ್ಕಾರಕ್ಕೆ ಜನಾದೇಶವನ್ನು ನೀಡಿದ್ದಾರೆ ಮತ್ತು ಸ್ವತಂತ್ರ ಭಾರತದಲ್ಲಿ ಇದನ್ನು ಜಾರಿಗೆ ತಂದ ಮೊದಲ ರಾಜ್ಯವಾಗಲಿದೆ ಎಂದು ಅವರು ಭರವಸೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.