ತರ್ನ್ ತರಣ್: ಗಡಿ ಭದ್ರತಾ ಪಡೆ (ಬಿಎಸ್ಎಫ್) ಗುರುವಾರ ಪಂಜಾಬ್ನ ತರ್ನ್ ತರಣ್ ಬಾರ್ಡರ್ ಜಿಲ್ಲೆಯಲ್ಲಿ 13 ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್ ಫ್ರಾಂಟಿಯರ್ ಬಿಎಸ್ಎಫ್ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಾರ, ಗಡಿ ಪ್ರದೇಶದಲ್ಲಿ ಹ್ಯೂಮ್ ಪೈಪ್ನಲ್ಲಿ ಅಡಗಿಸಿಡಲಾಗಿದ್ದ ಮಾದಕವಸ್ತುಗಳ ಬಗ್ಗೆ ವಿಶ್ವಾಸಾರ್ಹ ಮಾಹಿತಿಯನ್ನು ಪಡೆದ ಬಳಿಕ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಬಿಎಸ್ಎಫ್ ಪಡೆಗಳು ಮಾಹಿತಿ ದೊರೆತ ತಕ್ಷಣ ಕ್ಷಿಪ್ರವಾಗಿ ಸ್ಪಂದಿಸಿದ್ದು, ಶಂಕಿತ ಸ್ಥಳದಲ್ಲಿ ಸಂಪೂರ್ಣ ಶೋಧ ಕಾರ್ಯ ನಡೆದಿದೆ.
“ಮಧ್ಯಾಹ್ನ 12:40 ರ ಸುಮಾರಿಗೆ ಪಡೆಗಳು ಹೆರಾಯಿನ್ (ಒಟ್ಟು ತೂಕ- 13.160 ಕೆಜಿ) ತುಂಬಿದ 06 ಪ್ಲಾಸ್ಟಿಕ್ ಬಾಟಲಿಗಳನ್ನು ವಶಪಡಿಸಿಕೊಂಡವು. ಬಿಎಸ್ಎಫ್ ಗುಪ್ತಚರ ವಿಭಾಗವು ಪಡೆದ ಗುಪ್ತಚರ ಆಧಾರದ ಮೇಲೆ ನಡೆದ ಈ ಕಾರ್ಯಾಚರಣೆ ನಡೆದಿದದ್ದು, ತರ್ನ್ ತರಣ್ ಜಿಲ್ಲೆಯ ಹಳ್ಳಿ-ಕಲಾಶ್ ಗ್ರಾಮದ ಪಕ್ಕದ ಕೃಷಿ ಕ್ಷೇತ್ರದಲ್ಲಿ ಡ್ರಗ್ಸ ಪತ್ತೆಯಾಗಿದೆ” ಎಂದು ಅಧಿಕಾರಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.