ಟೆಲ್ ಅವಿವ್: “ನಾವು ಹಿಜ್ಬುಲ್ಲಾ ಉಗ್ರ ಸಂಘಟನೆಯ ಸಾಮರ್ಥ್ಯವನ್ನು ಕುಗ್ಗಿಸಿದ್ದೇವೆ. ನಾವು ಸೈಯದ್ ಹಸನ್ ನಸ್ರಲ್ಲಾ ಮತ್ತು ಆತನ ಉತ್ತರಾಧಿಕಾರಿ ಸೇರಿದಂತೆ ಸಾವಿರಾರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದ್ದೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹೇಳಿದ್ದಾರೆ.
ಲೆಬನಾನ್ನ ಜನರನ್ನು ಉದ್ದೇಶಿಸಿ ಮಾತನಾಡಿದ ನೆತನ್ಯಾಹು ಅವರು, “ನಿಮ್ಮ ದೇಶವನ್ನು ಹಿಜ್ಬುಲ್ಲಾದ ಹಿಡಿತದಿಂದ ಮರಳಿ ಪಡೆಯಿರಿ. ಲೆಬನಾನ್ ಒಂದು ಕಾಲದಲ್ಲಿ ಅದರ ಸಹನೆಗೆ, ಅದರ ಸೌಂದರ್ಯಕ್ಕೆ ಹೆಸರುವಾಸಿಯಾಗಿತ್ತು. ಇಂದು ಅದು ಅವ್ಯವಸ್ಥೆಯ ಗೂಡಾಗಿದೆ, ಯುದ್ಧದ ಸ್ಥಳವಾಗಿದೆ” ಎಂದು ಅವರು ಹೇಳಿದರು.
ನೆತನ್ಯಾಹು ಅವರು ಲೆಬನಾನ್ನ ಅವನತಿಗೆ ನಿರಂಕುಶಾಧಿಕಾರಿಗಳು ಮತ್ತು ಭಯೋತ್ಪಾದಕರ ಗ್ಯಾಂಗ್ ಕಾರಣವೆಂದು ಹೇಳಿದ್ದು, ನಿರ್ದಿಷ್ಟವಾಗಿ ಇರಾನ್ನ ಸಹಾಯ ಹೆಜ್ಬುಲ್ಲಾವನ್ನು ಲೆಬನಾನ್ನಲ್ಲಿ ನಿರಂಕುಶವಾಗಿಸಿತು ಎಂದಿದ್ದಾರೆ.
“ತನ್ನ ಹಿತಾಸಕ್ತಿಗಳನ್ನು ಪೂರೈಸಲು ಇರಾನ್ ಹಣಕಾಸು ಮತ್ತು ಶಸ್ತ್ರಾಸ್ತ್ರಗಳನ್ನು ಹೆಜ್ಬೊಲ್ಲಾಗೆ ನೀಡುತ್ತದೆ. ಹಿಜ್ಬುಲ್ಲಾ ಲೆಬನಾನ್ ಅನ್ನು ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರಗಳ ದಾಸ್ತಾನು ಮತ್ತು ಫಾರ್ವರ್ಡ್ ಇರಾನ್ ಮಿಲಿಟರಿ ನೆಲೆಯನ್ನಾಗಿ ಮಾಡಿದೆ. ಒಂದು ವರ್ಷದ ಹಿಂದೆ ಅಕ್ಟೋಬರ್ 7 ರ ಹತ್ಯಾಕಾಂಡದ ಒಂದು ದಿನದ ನಂತರ, ಹೆಜ್ಬೊಲ್ಲಾ ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಸೇರಿಕೊಂಡಿದೆ. ಇದು ನಮ್ಮ ನಗರಗಳ ಮೇಲೆ ಮತ್ತು ನಮ್ಮ ನಾಗರಿಕರ ಮೇಲೆ ಅಪ್ರಚೋದಿತ ದಾಳಿಯನ್ನು ಪ್ರಾರಂಭಿಸಿತು” ಎಂದಿದ್ದಾರೆ.
“ಇಸ್ರೇಲ್ ಇದನ್ನು ಕೊನೆಗಾಣಿಸಲು ನಿರ್ಧರಿಸಿದೆ. ನಮ್ಮ ಜನರನ್ನು ಸುರಕ್ಷಿತವಾಗಿ ಅವರ ಮನೆಗಳಿಗೆ ಹಿಂದಿರುಗಿಸಲು ಅಗತ್ಯವಿರುವ ಎಲ್ಲವನ್ನೂ ಮಾಡಲು ನಾವು ನಿರ್ಧರಿಸಿದ್ದೇವೆ. ಇಸ್ರೇಲ್ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ. ಇಸ್ರೇಲ್ಗೆ ಗೆಲ್ಲುವ ಹಕ್ಕಿದೆ. ಮತ್ತು ಇಸ್ರೇಲ್ ಗೆಲ್ಲುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.