ನವದೆಹಲಿ: ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತೀಯ ಬ್ರ್ಯಾಂಡ್ ಅನ್ನು ಉತ್ತೇಜಿಸಲು “ಮೇಡ್ ಇನ್ ಇಂಡಿಯಾ” ಲೇಬಲ್ ಅನ್ನು ಆರಂಭಿಸುವ ಪ್ರಸ್ತಾಪದ ಬಗ್ಗೆ ಭಾರತ ಸರ್ಕಾರವು ಚರ್ಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಉನ್ನತ ಮಟ್ಟದ ಸಮಿತಿಯು ಯೋಜನೆಯ ವಿವರಗಳನ್ನು ಪರಿಶೀಲಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಮೇಡ್ ಇನ್ ಜಪಾನ್” ಅಥವಾ “ಮೇಡ್ ಇನ್ ಸ್ವಿಟ್ಜರ್ಲೆಂಡ್” ಹೇಗೆ ಗುಣಮಟ್ಟದ ಬಗ್ಗೆ ಕಲ್ಪನೆಯನ್ನು ಹುಟ್ಟುಹಾಕುತ್ತದೆಯೋ ಅದೇ ರೀತಿ ಭಾರತಕ್ಕೂ ಬಲವಾದ ಬ್ರ್ಯಾಂಡ್ ಗುರುತನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿದೆ ಎಂದು ವರದಿಗಳು ಹೇಳಿವೆ.
“ನಾವು ಸ್ವಿಟ್ಜರ್ಲೆಂಡ್ ಬಗ್ಗೆ ಯೋಚಿಸಿದಾಗ, ಕೈಗಡಿಯಾರಗಳು, ಚಾಕೊಲೇಟ್ಗಳು ಮತ್ತು ಬ್ಯಾಂಕಿಂಗ್ ವ್ಯವಸ್ಥೆಗಳ ಬಗ್ಗೆ ಯೋಚಿಸುತ್ತೇವೆ. ಅಂತಹುದೇ ಭಾರತಕ್ಕೂ ಅಗತ್ಯವಿದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
“ನಾವು ಅದನ್ನು ಹೇಗೆ ಮಾಡಬಹುದು ಎಂಬುದರ ಕುರಿತು ನಾವು ಚರ್ಚೆಗಳನ್ನು ನಡೆಸುತ್ತಿದ್ದೇವೆ. ಜವಳಿಗಳಂತಹ ನಿರ್ದಿಷ್ಟ ವಲಯಗಳಿಗೆ ನಾವು ಈ ಯೋಜನೆಯನ್ನು ರೂಪಿಸುತ್ತೇವೆಯೇ, ಅಲ್ಲಿ ನಮಗೆ ಬಲವಿದೆಯೇ? ಎಂಬಿತ್ಯಾದಿ ವಿಷಯಗಳನ್ನು ಪರಿಶೀಲಿಸುತ್ತಿದ್ದೇವೆ” ಎಂದು ಅಧಿಕಾರಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.