ಟೆಲ್ ಅವಿವ್: ಇರಾನ್ನ ಕ್ಷಿಪಣಿ ದಾಳಿಯು ತನ್ನ ವಾಯುನೆಲೆಯ ಮೇಲೆ ಹೊಡೆದಿರುವುದು ನಿಜ ಎಂದು ಇಸ್ರೇಲ್ ರಕ್ಷಣಾ ಪಡೆಗಳು (IDF) ದೃಢಪಡಿಸಿದೆ. ಆದರೆ, ಯಾವುದೇ ಗಮನಾರ್ಹ ಹಾನಿ ಸಂಭವಿಸಿಲ್ಲ ಮತ್ತು ಇಸ್ರೇಲಿ ವಾಯುಪಡೆಯ ಕಾರ್ಯಾಚರಣೆಗಳ ಮೇಲೆ ಇದು ಪರಿಣಾಮ ಬೀರಿಲ್ಲ ಎಂದಿದೆ.
IDF ವರದಿಗಳ ಪ್ರಕಾರ, ಕ್ಷಿಪಣಿಯು ಕಚೇರಿ ಕಟ್ಟಡಗಳು ಮತ್ತು ನಿರ್ವಹಣಾ ಪ್ರದೇಶಗಳನ್ನು ಹೊಡೆದಿದೆ. ಆದರೆ ಯಾವುದೇ ಗಂಭೀರವಾದ ಪರಿಣಾಮ ಬೀರಿಲ್ಲ. ರಕ್ಷಣಾ ಪಡೆಗಳ ನಿರಂತರ ಕಾರ್ಯಾಚರಣೆಗಳಿಗೆ ಇದರಿಂದ ಯಾವುದೇ ಹಾನಿಯಾಗಿಲ್ಲ. ಫೈಟರ್ ಜೆಟ್ಗಳು, ಡ್ರೋನ್ಗಳು, ಇತರ ವಿಮಾನಗಳು, ಯುದ್ಧಸಾಮಗ್ರಿಗಳು ಅಥವಾ ನಿರ್ಣಾಯಕ ಮೂಲಸೌಕರ್ಯಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಮಿಲಿಟರಿ ಹೇಳಿದೆ.
ದಾಳಿಯ ಕೆಲವೇ ಗಂಟೆಗಳಲ್ಲಿ ರಕ್ಷಣಾ ಪಡೆಗಳು ತನ್ನ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಈ ಕಾರ್ಯಾಚರಣೆಗಳಲ್ಲಿ ಬೈರುತ್ನಲ್ಲಿ ಹೆಜ್ಬೊಲ್ಲಾ ವಿರುದ್ಧದ ಪ್ರಮುಖ ದಾಳಿಗಳು ಸೇರಿವೆ.
ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಇರಾನ್ ಯುದ್ಧಕ್ಕಾಗಿ ನೋಡುತ್ತಿಲ್ಲ. ಆದರೆ ಇಸ್ರೇಲ್ ಪ್ರತೀಕಾರಕ್ಕೆ ಮುಂದಾದರೆ ಬಲವಾದ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ದೋಹಾದಲ್ಲಿ ಕತಾರ್ನ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೆಜೆಶ್ಕಿಯಾನ್, “ಇಸ್ರೇಲ್ ಪ್ರತಿಕ್ರಿಯಿಸಲು ಬಯಸಿದರೆ, ನಾವು ಬಲವಾದ ಪ್ರತಿಕ್ರಿಯೆಯನ್ನು ಎದುರಿಸುತ್ತೇವೆ. ಇಸ್ಲಾಮಿಕ್ ಗಣರಾಜ್ಯವು ಇದಕ್ಕೆ ಬದ್ಧವಾಗಿದೆ ಎಂದಿದ್ದಾರೆ.
ಇನ್ನೊಂದೆಡೆ ಟೆಲ್ ಅವಿವ್ನಲ್ಲಿ ನಡೆದ ಉಗ್ರ ದಾಳಿಯ ಹೊಣೆಯನ್ನು, ಹಮಾಸ್ನ ಮಿಲಿಟರಿ ವಿಭಾಗ ಅಲ್-ಕಸ್ಸಾಮ್ ಬ್ರಿಗೇಡ್ಸ್ ಹೊತ್ತುಕೊಂಡಿದೆ. ಇರಿತ ಮತ್ತು ಗುಂಡಿನ ದಾಳಿ ಎರಡನ್ನೂ ಒಳಗೊಂಡ ದಾಳಿಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದರು ಮತ್ತು ಹಲವರು ಗಾಯಗೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.