ನವದೆಹಲಿ: ಸ್ವಚ್ಛ ಭಾರತ ನಿರ್ಮಾಣಕ್ಕೆ ನಿರಂತರ ಪ್ರಯತ್ನ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಇಂದು ನವದೆಹಲಿಯಲ್ಲಿ ನಡೆದ ಸ್ವಚ್ಛ ಭಾರತ್ ಮಿಷನ್ನ 10 ವರ್ಷಗಳ ನೆನಪಿಗಾಗಿ ಆಯೋಜಿಸಲಾದ ಸ್ವಚ್ಛತಾ ಹಿ ಸೇವಾ 2024 ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಸ್ವಚ್ಛತೆಯನ್ನು ಜನ ಆಂದೋಲನವನ್ನಾಗಿ ಮಾಡಿದ 140 ಕೋಟಿ ಭಾರತೀಯರ ಅಚಲ ಮನೋಭಾವಕ್ಕೆ ವಂದಿಸಿದರು. ಸ್ವಚ್ಛ ಭಾರತ್ ಮಿಷನ್ನ ಯಶಸ್ಸಿಗೆ ಎಲ್ಲರೂ ಸಹಕರಿಸಿದ್ದಾರೆ ಎಂದು ಒತ್ತಿ ಹೇಳಿದರು.
ಸೇವಾ ಪಖ್ವಾಡದ ಕೇವಲ 15 ದಿನಗಳಲ್ಲಿ ದೇಶದಲ್ಲಿ 27 ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ಇದರಲ್ಲಿ 28 ಕೋಟಿಗೂ ಹೆಚ್ಚು ಜನರು ಭಾಗವಹಿಸಿದ್ದರು. ಮಹಾತ್ಮಾ ಗಾಂಧೀಜಿ ಮತ್ತು ದೇಶದ ಇತರ ಮಹಾನ್ ವ್ಯಕ್ತಿಗಳು ಕಂಡ ಭಾರತದ ಕನಸನ್ನು ನನಸು ಮಾಡಲು ಈ ದಿನ ನಮಗೆ ಸ್ಫೂರ್ತಿ ನೀಡುತ್ತದೆ. ಸ್ವಚ್ಛ ಭಾರತ್ ಮಿಷನ್ನ ಯಶಸ್ಸಿನಲ್ಲಿ ಎಲ್ಲಾ ದೇಶವಾಸಿಗಳು, ಸ್ವಚ್ಛತಾ ಕಾರ್ಯಕರ್ತರು, ಧಾರ್ಮಿಕ ಮುಖಂಡರು, ಕ್ರೀಡಾಪಟುಗಳು, ಸೆಲೆಬ್ರಿಟಿಗಳು, ಎನ್ಜಿಒಗಳು ಮತ್ತು ಮಾಧ್ಯಮ ಸಿಬ್ಬಂದಿಯ ಕೊಡುಗೆಗಳನ್ನು ಮೋದಿ ಶ್ಲಾಘಿಸಿದರು.
10 ಸಾವಿರ ಕೋಟಿ ರೂಪಾಯಿಗಳ ಸ್ವಚ್ಛತಾ ಯೋಜನೆಗಳನ್ನು ಇಂದು ಉದ್ಘಾಟಿಸಲಾಗಿದೆ. ಮಿಷನ್ ಅಮೃತ್ ಭಾಗವಾಗಿ ವಿವಿಧ ನಗರಗಳಲ್ಲಿ ನೀರು ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಕಸದಿಂದ ಜೈವಿಕ ಅನಿಲ ಉತ್ಪಾದನೆಗೆ ನಮಾಮಿ ಗಂಗೆ ಅಥವಾ ‘ಗೋವರ್ಧನ’ ಸ್ಥಾವರಕ್ಕೆ ಸಂಬಂಧಿಸಿದ ಕೆಲಸವು ಸ್ವಚ್ಛ ಭಾರತ್ ಮಿಷನ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಪ್ರಧಾನಿ ಹೇಳಿದರು.
ಇನ್ನು 1,000 ವರ್ಷಗಳ ನಂತರವೂ 21ನೇ ಶತಮಾನದ ಭಾರತವನ್ನು ಅಧ್ಯಯನ ಮಾಡಿದಾಗ ಸ್ವಚ್ಛ ಭಾರತ ಅಭಿಯಾನ ಖಂಡಿತವಾಗಿ ನೆನಪಾಗುತ್ತದೆ . ಸ್ವಚ್ಛ ಭಾರತ್ ಮಿಷನ್ ಈ ಶತಮಾನದ ವಿಶ್ವದ ಅತ್ಯಂತ ದೊಡ್ಡ ಮತ್ತು ಅತ್ಯಂತ ಯಶಸ್ವಿ ಜನ-ಸಹಭಾಗಿತ್ವ, ಜನ-ನೇತೃತ್ವದ ಸಾಮೂಹಿಕ ಆಂದೋಲನವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ನೈರ್ಮಲ್ಯ ಮತ್ತು ಸ್ವಚ್ಛತೆಗೆ ಸಂಬಂಧಿಸಿದ 9,600 ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು. ಈ ಯೋಜನೆಗಳು ಅಮೃತ್ ಮತ್ತು ಅಮೃತ್ 2.0, ಸ್ವಚ್ಛ ಗಂಗಾ ರಾಷ್ಟ್ರೀಯ ಮಿಷನ್ ಮತ್ತು ಗೋಬರ್ಧನ್ ಯೋಜನೆಯಡಿಯಲ್ಲಿ 15 ಸಂಕುಚಿತ ಜೈವಿಕ ಅನಿಲ ಸ್ಥಾವರ ಯೋಜನೆಗಳ ಉಪಕ್ರಮಗಳನ್ನು ಒಳಗೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.