ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರನೇ ಮತ್ತು ಅಂತಿಮ ಹಂತದ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. 7 ಜಿಲ್ಲೆಗಳಲ್ಲಿ ವ್ಯಾಪಿಸಿರುವ 40 ವಿಧಾನಸಭಾ ಕ್ಷೇತ್ರಗಳಲ್ಲಿ ಸುಗಮ, ಶಾಂತಿಯುತ ಮತ್ತು ಘಟನೆ ರಹಿತ ಮತದಾನಕ್ಕಾಗಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ.
ಇಂದು ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. 5060 ಮತಗಟ್ಟೆಗಳಲ್ಲಿ 20 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಕಾಶ್ಮೀರ ವಿಭಾಗದ ಬಾರಾಮುಲ್ಲಾ, ಕುಪ್ವಾರ ಮತ್ತು ಬಂಡಿಪೋರಾ ಮತ್ತು ಜಮ್ಮು ವಿಭಾಗದಲ್ಲಿ ಜಮ್ಮು, ಉಧಂಪುರ, ಕಥುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಈ ಹಂತದಲ್ಲಿ 415 ಅಭ್ಯರ್ಥಿಗಳ ಭವಿಷ್ಯವನ್ನು 39 ಲಕ್ಷಕ್ಕೂ ಹೆಚ್ಚು ಮತದಾರರು ನಿರ್ಧರಿಸಲಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಮುಜಾಫರ್ ಹುಸೇನ್ ಬೇಗ್, ಕಾಶ್ಮೀರ ವಿಭಾಗದಲ್ಲಿ ಬಶರತ್ ಬುಖಾರಿ, ಸಜಾದ್ ಗನಿ ಲೋನ್ ಮತ್ತು ನಾಸಿರ್ ಅಸ್ಲಂ ವಾನಿ ಮತ್ತು ಜಮ್ಮು ವಿಭಾಗದಲ್ಲಿ ದೇವಿಂದರ್ ಸಿಂಗ್ ರಾಣಾ, ಚೌಧರಿ ಲಾಲ್ ಸಿಂಗ್ ಮತ್ತು ರಮಣ್ ಭಲ್ಲಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.
ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲ ಎರಡು ಹಂತಗಳಿಗೆ ಸೆಪ್ಟೆಂಬರ್ 18 ಮತ್ತು 25 ರಂದು ಮತದಾನ ನಡೆದಿತ್ತು. ಮೊದಲ ಹಂತದಲ್ಲಿ ಶೇ.61ಕ್ಕಿಂತ ಹೆಚ್ಚು ಹಾಗೂ ಎರಡನೇ ಹಂತದಲ್ಲಿ ಶೇ.57ರಷ್ಟು ಮತದಾನವಾಗಿದೆ. ಎಲ್ಲಾ ಹಂತಗಳ ಮತ ಎಣಿಕೆ ಇದೇ ತಿಂಗಳ 8 ರಂದು ಹರಿಯಾಣ ಜೊತೆಗೆ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.