ನವದೆಹಲಿ: ಒಂದು ವೇಳೆ ಪಾಕಿಸ್ಥಾನ ಭಾರತದೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿದ್ದರೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯಿಂದ ಆ ದೇಶ ಕೋರಿದ ಹಣಕ್ಕಿಂತ ಹೆಚ್ಚಿನ ಬೇಲ್ಔಟ್ ಪ್ಯಾಕೇಜ್ ಅನ್ನು ಭಾರತ ಪಾಕಿಸ್ತಾನಕ್ಕೆ ನೀಡುತ್ತಿತ್ತು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಬಂಡಿಪೋರಾ ಜಿಲ್ಲೆಯ ಗುರೇಜ್ ಅಸೆಂಬ್ಲಿ ವಿಭಾಗದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಅವರು 2014-15ರಲ್ಲಿ ಘೋಷಿಸಿದ ʼಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಧಾನ ಮಂತ್ರಿ ಅಭಿವೃದ್ಧಿ ಪ್ಯಾಕೇಜ್ʼ ಬಗ್ಗೆ ಉಲ್ಲೇಖಿಸಿದರು.
“ಮೋದಿ ಅವರು 2014-15 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಿದರು ಅದು ಈಗ 90,000 ಕೋಟಿ ರೂ. ತಲುಪಿದೆ. ಈ ಮೊತ್ತವು ಪಾಕಿಸ್ತಾನವು IMF ನಿಂದ (ಬೇಲ್ಔಟ್ ಪ್ಯಾಕೇಜ್ ಆಗಿ) ಬಯಸಿದ್ದಕ್ಕಿಂತ ದೊಡ್ಡದಾಗಿದೆ” ಎಂದರು.
“ನಾವು ಸ್ನೇಹಿತರನ್ನು ಬದಲಾಯಿಸಬಹುದು, ಆದರೆ ನಾವು ನಮ್ಮ ನೆರೆಹೊರೆಯವರನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂಬ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಸಿದ್ಧ ಹೇಳಿಕೆಯನ್ನೂ ಸಿಂಗ್ ಉಲ್ಲೇಖಿಸಿದ್ದಾರೆ. “ನಾನು ನನ್ನ ಪಾಕಿಸ್ತಾನಿ ಸ್ನೇಹಿತರಿಗೆ ಹೇಳಿದೆ, ನಮ್ಮ ಸಂಬಂಧ ಏಕೆ ಹಳಸಿದೆ? ನಾವು ನೆರೆಹೊರೆಯವರು, ನಮ್ಮ ಸಂಬಂಧಗಳು ಉತ್ತಮವಾಗಿದ್ದರೆ, ನಾವು IMF ಗಿಂತ ಹೆಚ್ಚಿನ ಹಣವನ್ನು ನೀಡುತ್ತಿದ್ದೆವು” ಎಂದರು.
ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಪುನರುಚ್ಚರಿಸಿದ ಸಿಂಗ್, ರಕ್ಷಣಾ ಸಚಿವರಾಗಿ, ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಫಕೀರ್ ಮೊಹಮ್ಮದ್ ಖಾನ್ ಅವರನ್ನು ಗೆಲ್ಲಿಸಿದರೆ, ಗುರೇಜ್ನಿಂದ ಹೆಚ್ಚಿನ ಜನರನ್ನು ಭಾರತೀಯ ಸೇನೆಗೆ ನೇಮಿಸಿಕೊಳ್ಳಲಾಗುವುದು ಎಂದು ಸಭೆಗೆ ಭರವಸೆ ನೀಡುತ್ತೇನೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.