ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಭಾರತವನ್ನು ದಾಸ್ಯದಿಂದ ಮುಕ್ತಿಗೊಳಿಸಲು ಎಳೆಯ ವಯಸ್ಸಿನಲ್ಲೇ ಪ್ರಾಣಾರ್ಪಣೆ ಮಾಡಿದ ಭಗತ್ ಸಿಂಗ್ ಅವರು ಜೀವನಚರಿತ್ರೆ ಇಂದಿಗೂ ಸ್ಪೂರ್ತಿ ನೀಡುತ್ತಲೇ ಇದೆ.
ಭಗತ್ ಸಿಂಗ್ ಜನಿಸಿದ್ದು ಸೆಪ್ಟೆಂಬರ್ 28 , 1907 ರಲ್ಲಿ, ಇಂದು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಎಂದೇ ಕರೆಯಲ್ಪಡುವ ಭಗತ್ ಸಿಂಗ್ ಅವರ 117ನೇ ಜನ್ಮದಿನ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಭಗತ್ ಸಿಂಗ್ ಅವರಿಗೆ ನಮನ ಸಲ್ಲಿಸಿದರು ಮತ್ತು ಮಾತೃಭೂಮಿಯ ಸ್ವಾಭಿಮಾನವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಅಮರ ಹುತಾತ್ಮ ಎಂದು ಬಣ್ಣಿಸಿದ್ದಾರೆ.
ಮಾತೃಭೂಮಿಯ ಹೆಮ್ಮೆಯನ್ನು ಕಾಪಾಡಲು ಪ್ರಾಣ ತ್ಯಾಗ ಮಾಡಿದ ಅಮರ ಶಹೀದ್ ಭಗತ್ ಸಿಂಗ್ ಅವರಿಗೆ ಅವರ ಜನ್ಮದಿನದಂದು ನಮನಗಳು ಎಂಬ ಒಕ್ಕಣೆಯೊಂದಿಗೆ ಮೋದಿ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಕ್ರಾಂತಿಕಾರಿ ಭಗತ್ ಸಿಂಗ್ ಬ್ರಿಟಿಷರ ಆಡಳಿತದ ವಿರುದ್ಧ ದೊಡ್ಡ ಧ್ವನಿಯಲ್ಲಿ ಸವಾಲು ಹಾಕಿದ್ದಲ್ಲದೆ ದೇಶದ ಸ್ವಾತಂತ್ರ್ಯ ಮತ್ತು ಸುವರ್ಣ ಭವಿಷ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಭಗತ್ ಸಿಂಗ್ ಅವರ ತ್ಯಾಗದ ಕಿಡಿ ಎಷ್ಟು ದೊಡ್ಡ ಜ್ವಾಲೆಯಾಯಿತು ಎಂದರೆ ಇಡೀ ದೇಶದಲ್ಲಿ ಸ್ವಾತಂತ್ರ್ಯದ ಅಲೆಯು ಹೆಚ್ಚು ತೀವ್ರವಾಯಿತು ಎಂದು ಬಣ್ಣಸಿದ್ದಾರೆ.
मातृभूमि के स्वाभिमान की रक्षा के लिए अपना जीवन बलिदान करने वाले अमर शहीद भगत सिंह को उनकी जन्म-जयंती पर शत-शत नमन। pic.twitter.com/9s0mJ5guRG
— Narendra Modi (@narendramodi) September 28, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.