ನವದೆಹಲಿ: ಕೇಂದ್ರ ಸರ್ಕಾರವು ವೇರಿಯಬಲ್ ಡಿಯರ್ನೆಸ್ ಭತ್ಯೆಯನ್ನು ಪರಿಷ್ಕರಿಸುವ ಮೂಲಕ ಕನಿಷ್ಠ ವೇತನ ದರಗಳಲ್ಲಿ ಹೆಚ್ಚಳವನ್ನು ಘೋಷಿಸಿದೆ. ಹೊಸ ವೇತನ ದರಗಳು ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ.
ಕೌಶಲ್ಯ ಮಟ್ಟಗಳ ಆಧಾರದ ಮೇಲೆ ಕನಿಷ್ಠ ಕೂಲಿ ದರಗಳನ್ನು ವರ್ಗೀಕರಿಸಲಾಗಿದೆ. ಕೌಶಲ್ಯರಹಿತ, ಅರೆ-ಕುಶಲ, ನುರಿತ, ಮತ್ತು ಹೆಚ್ಚು ನುರಿತ, ಹಾಗೆಯೇ ಭೌಗೋಳಿಕ ಪ್ರದೇಶಗಳಾದ A, B, ಮತ್ತು C ಆಧರಿಸಿ ವೇತನ ಪರಿಷ್ಕರಿಸಲಾಗಿದೆ.
ನಿರ್ಮಾಣ, ಶುಚಿಗೊಳಿಸುವಿಕೆ, ಲೋಡಿಂಗ್ ಮತ್ತು ಅನ್ಲೋಡಿಂಗ್ನಂತಹ ಕೌಶಲ್ಯರಹಿತ ಕೆಲಸದ ವಲಯದ ಕಾರ್ಮಿಕರಿಗೆ ವಲಯ “ಎ” ನಲ್ಲಿ ಕನಿಷ್ಠ ವೇತನ ದರವು ದಿನಕ್ಕೆ 783 ರೂ (ತಿಂಗಳಿಗೆ ರೂ. 20,358) ಆಗಿರುತ್ತದೆ. ಅರೆ ಕೌಶಲ್ಯ ಕಾರ್ಮಿಕರಿಗೆ ವೇತನ ದಿನಕ್ಕೆ ರೂ 868 (ತಿಂಗಳಿಗೆ ರೂ. 22,568) ಆಗಿರುತ್ತದೆ. ಕೌಶಲ್ಯಭರಿತ ಗುಮಾಸ್ತ ಮತ್ತು ನಿರಾಯುಧ ವಾಚ್ಮ್ಯಾನ್ಗೆ ದಿನಕ್ಕೆ ರೂ 9540 (ತಿಂಗಳಿಗೆ ರೂ.24,804) ಆಗಿರುತ್ತದೆ. ಹೆಚ್ಚು ನುರಿತ ಮತ್ತು ಶಸ್ತ್ರಸಜ್ಜಿತ ವಾಚ್ ಮ್ಯಾನ್ ಗೆ ದಿನಕ್ಕೆ ರು 1,035 (ತಿಂಗಳಿಗೆ ರೂ 26,910) ಆಗಿರುತ್ತದೆ.
ಹೊಸ ವೇತನ ದರ ಅಕ್ಟೋಬರ್ 1, 2024 ರಿಂದ ಅನ್ವಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.