ನವದೆಹಲಿ: ಗುಜರಾತ್ನ ಧೋಲೇರಾದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಯೋಜನೆಗಳನ್ನು ಸ್ಥಾಪಿಸುತ್ತಿರುವ ಎರಡು ಕಂಪನಿಗಳಾದ ಟಾಟಾ ಸನ್ಸ್ ಮತ್ತು ತೈವಾನ್ ಮೂಲದ ಪವರ್ಚಿಪ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಷನ್ (PSMC)ನ ಉನ್ನತ ಅಧಿಕಾರಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುವಾರ ಭೇಟಿ ಮಾಡಿದರು.
ಉಭಯ ಕಂಪನಿಗಳ ನಾಯಕರು ಪ್ರಧಾನಿ ಮೋದಿಯವರಿಗೆ ತಮ್ಮ ಚಾಲ್ತಿಯಲ್ಲಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು ಎನ್ನಲಾಗಿದೆ.
“ಟಾಟಾ ಸನ್ಸ್ ಮತ್ತು PSMC ಯ ನಾಯಕತ್ವದ ತಂಡದೊಂದಿಗೆ ಉತ್ತಮ ಸಭೆ ನಡೆಸಿದ್ದೇವೆ. ಅವರು ತಮ್ಮ ಸೆಮಿಕಂಡಕ್ಟರ್ ಉತ್ಪಾದನಾ ಯೋಜನೆಗಳ ಕುರಿತು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. PSMC ಭಾರತದಲ್ಲಿ ತನ್ನ ಹೆಜ್ಜೆಗುರುತನ್ನು ಇನ್ನಷ್ಟು ವಿಸ್ತರಿಸಲು ಉತ್ಸಾಹವನ್ನು ವ್ಯಕ್ತಪಡಿಸಿದೆ” ಎಂದು ಪ್ರಧಾನಿ ಮೋದಿ X ಪೋಸ್ಟ್ ಮಾಡಿದ್ದಾರೆ.
ಭಾರತವು ದೊಡ್ಡ ಚಿಪ್ ಉತ್ಪಾದಿಸುವ ರಾಷ್ಟ್ರಗಳ ಸಾಲಿಗೆ ಸೇರಲು ಬಯಸುತ್ತಿರುವ ಕಾರಣ ಟಾಟಾ ಗ್ರೂಪ್ ಮತ್ತು ಪಿಎಸ್ಎಂಸಿ ನಿರ್ಮಿಸುತ್ತಿರುವ ಸೇರಿದಂತೆ ಮೂರು ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಪ್ಲಾಂಟ್ಗಳಿಗೆ ಈ ವರ್ಷದ ಮಾರ್ಚ್ನಲ್ಲಿ ಪ್ರಧಾನಿ ಮೋದಿ ಅಡಿಪಾಯ ಹಾಕಿದ್ದರು.
Had a great meeting with the leadership team of Tata Sons and PSMC. They shared updates on their Semiconductor manufacturing projects. PSMC expressed enthusiasm to further expand its footprint in India. pic.twitter.com/uyriq9qiLb
— Narendra Modi (@narendramodi) September 26, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.