ಮಂಗಳೂರು: ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು ದೆಹಲಿ ಪ್ರವಾಸದಲ್ಲಿದ್ದು, ಜಿಲ್ಲೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಹಲವಾರು ಸಚಿವರನ್ನು ಭೇಟಿಯಾಗಿ ಮಹತ್ವದ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಕರಾವಳಿಗರ ಬಹುವರ್ಷಗಳ ಬೇಡಿಕೆಯಾಗಿರುವ ಮಂಗಳೂರು – ತಿರುವನಂತಪುರ ಎಕ್ಸ್ಪ್ರೆಸ್ ರೈಲು (ನಂ.16347/48) ಸೇವೆಯನ್ನು ಕನ್ಯಾಕುಮಾರಿಯವರೆಗೆ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ. ಸಂಸದರ ಮನವಿಯಂತೆ ರೈಲ್ವೆ ಸಚಿವಾಲಯವು ಸಕಾರಾತ್ಮಕವಾಗಿ ಸ್ಪಂದಿಸಿದಲ್ಲಿ ಇದು ಖಂಡಿತವಾಗಿಯೂ ಐತಿಹಾಸಿಕ ನಡೆಯಾಗಲಿದೆ ಹಾಗೂ ಇದರಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮತ್ತಷ್ಟು ಬಲ ಬರಲಿದೆ.
ದೆಹಲಿಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ವುಮ್ಲುನ್ಮಾಂಗ್ ವುಲ್ನಮ್ ಐಎಎಸ್ ಅವರನ್ನು ಭೇಟಿಯಾದ ಚೌಟ, ಮಂಗಳೂರು ವಿಮಾನ ನಿಲ್ದಾಣದ ವಿಸ್ತರಣೆ, ವಿಶೇಷವಾಗಿ ಮಳೆಗಾಲದಲ್ಲಿ ಕರಾವಳಿಯಲ್ಲಿ ಇತರ ಪ್ರಯಾಣ ಮಾರ್ಗಗಳು ತೊಂದರೆ ಎದುರಿಸುವಾಗ ವಿಮಾನದ ದರ ಹೆಚ್ಚಳ ಮಾಡುವುದನ್ನು ತಡೆಯುವ ಅಗತ್ಯ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದರು.
ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್ಟಿಸಿ) ನಿವೃತ್ತ ನೌಕರರಿಗೆ ಹೆಚ್ಚಿನ ಪಿಂಚಣಿ ಯೋಜನೆ ಜಾರಿ ವಿಳಂಬದ ವಿಷಯವನ್ನು ಗಮನಕ್ಕೆ ತಂದರು. ದಕ್ಷಿಣಕನ್ನಡದಲ್ಲೇ 600 ಕ್ಕೂ ಹೆಚ್ಚು ನಿವೃತ್ತ ಕೆಎಸ್ಆರ್ಟಿಸಿ ನೌಕರರು ಈ ಸಮಸ್ಯೆಯಿಂದ ಬಾಧಿತರಾಗಿದ್ದಾರೆ.
Met Hon Minister of State of Labour and Employment Shobha Karandlaje awaru in Delhi today and brought to notice the issue of delay in implementing the higher pension scheme for retired Karnataka State Road Transport Corporation (KSRTC) employees.
There are more than 600 retired… pic.twitter.com/bkf6nKm5pJ
— Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ (@CaptBrijesh) September 24, 2024
Met our Union Minister of State for Railways & Jal Shakti Shri @VSOMANNA_BJP awaru in Delhi today and submitted a letter requesting his intervention to:
1. Extend Train No. 16347/48 Mangalore-Trivandrum Express to Kanyakumari or Nagercoil.
2. Direct the Trivandrum division to… pic.twitter.com/BYPyuJCeeO
— Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ (@CaptBrijesh) September 24, 2024
Met Sri Vumlunmang Vualnam IAS, Secretary – Ministry of Civil Aviation, in Delhi today.
Discussed among others issues, the expansion of Mangaluru Airport, surge in fares by airlines especially during monsoon season when other modes of travel to our coastal town are often badly… pic.twitter.com/RrTEXx9Ngv
— Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ (@CaptBrijesh) September 24, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.