ಹೈದರಾಬಾದ್: ಆಂಧ್ರಪ್ರದೇಶದ ತಿರುಪತಿಯಲ್ಲಿರುವ ವೆಂಕಟೇಶ್ವರ ದೇವಸ್ಥಾನವನ್ನು ಇಂದು ಶುದ್ದೀಕರಣ ಮಾಡಲಾಗಿದೆ. ಪ್ರಾಣಿಗಳ ಕೊಬ್ಬು , ಮೀನಿನ ಎಣ್ಣೆ, ಗೋಮಾಂಸ ಟ್ಯಾಲೋ ಮತ್ತು ಹಂದಿ ಕೊಬ್ಬು ಮಿಶ್ರಿತ ತುಪ್ಪ ಬಳಸಿ ಲಡ್ಡುಗಳನ್ನು ತಯಾರಿಸಲಾಗುತಿತ್ತು ಎಂಬ ಆರೋಪದ ನಡುವೆ ಈ ಶುದ್ಧೀಕರಣ ಕ್ರಿಯೆ ನಡೆದಿದೆ.
ಹಿಂದೂ ಧರ್ಮದ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾದ ತಿರುಪತಿಯಲ್ಲಿ ಪುರೋಹಿತರ ತಂಡ ಇಂದು ‘ಮಹಾ ಶಾಂತಿ ಹೋಮ’ವನ್ನು ನಡೆಸಿತು. ಈ ಸಮಾರಂಭವು ಕಲಬೆರಕೆಯ ದುಷ್ಪರಿಣಾಮಗಳನ್ನು ನಿವಾರಿಸುತ್ತದೆ ಮತ್ತು ಲಡ್ಡುಗಳ ಪಾವಿತ್ರ್ಯವನ್ನು ಪ್ರಸಾದವಾಗಿ ಮರುಸ್ಥಾಪಿಸುತ್ತದೆ ಮತ್ತು ಭಕ್ತರ ಯೋಗಕ್ಷೇಮವನ್ನು ಖಚಿತಪಡಿಸುತ್ತದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ದೇವಸ್ಥಾನವನ್ನು ನಡೆಸುತ್ತಿರುವ ಸರ್ಕಾರಿ ಟ್ರಸ್ಟ್ – ತಿರುಮಲ ತಿರುಪತಿ ದೇವಸ್ಥಾನಂನ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲಾ ರಾವ್ ಮಾತನಾಡಿ, ಲಡ್ಡುಗಳನ್ನು ತಯಾರಿಸುವ ಅಡುಗೆಮನೆಯ ಮೇಲೆ ವಿಶೇಷ ಗಮನಹರಿಸುವುದರೊಂದಿಗೆ ಬೆಳಿಗ್ಗೆ 6 ರಿಂದ ನಾಲ್ಕು ಗಂಟೆಗಳ ಕಾಲ ಆಚರಣೆಗಳು ನಡೆಯಿತು. ‘ಶುದ್ಧ ಹಸುವಿನ ತುಪ್ಪ’ ಸಂಗ್ರಹಣೆಯ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ ಮತ್ತು ಇದು ದೇವಾಲಯದ ಲಡ್ಡುಗಳು ಮತ್ತು ಪ್ರಸಾದಗಳಿಗೆ ಹೆಚ್ಚಿನ ರುಚಿ ತಂದುಕೊಟ್ಟಿದೆ ಎಂದು ಅವರು ಹೇಳಿದರು.
#WATCH | Andhra Pradesh: TTD (Tirumala Tirupati Devasthanams) organised a Maha Shanti Homam in the wake of Laddu Prasadam row.
Executive officer of Tirumala Tirupathi Devastanam (TTD) Shamala Rao and other officials of the Board participated in the Homamam along with the… pic.twitter.com/Gkh7JFeljT
— ANI (@ANI) September 23, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.