ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಮರುಸ್ಥಾಪಿಸುವ ಬಗ್ಗೆ ಪಾಕಿಸ್ತಾನ ಮತ್ತು ಜಮ್ಮು-ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಮೈತ್ರಿಕೂಟ ಒಂದೇ ಗುರಿಯನ್ನು ಹಂಚಿಕೊಂಡಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ನೀಡಿರುವ ಹೇಳಿಕೆ ರಾಜಕೀಯ ಗದ್ದಲವನ್ನು ಎಬ್ಬಿಸಿದೆ.
ಕ್ಯಾಪಿಟಲ್ ಟಾಕ್ನಲ್ಲಿ ಜಿಯೋ ನ್ಯೂಸ್ನ ಹಿರಿಯ ಪತ್ರಕರ್ತ ಹಮೀದ್ ಮಿರ್ ಅವರೊಂದಿಗಿನ ಸಂದರ್ಶನದಲ್ಲಿ ಹೇಳಿಕೆ ನೀಡಿದ ಖ್ವಾಜಾ ಆಸೀಫ್, ಆರ್ಟಿಕಲ್ 370 ಮತ್ತು 35 ಎ ಅನ್ನು ಮರುಸ್ಥಾಪಿಸುವ ಕುರಿತು ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿ ಹೊಂದಿರುವ ಗುರಿಯನ್ನೇ ನಾವು ಕೊಂದಿದ್ದೇವೆ. 370 ನೇ ವಿಧಿ ಮರುಸ್ಥಾಪನೆಯಾಗಬೇಕು ಎಂದಿದ್ದಾರೆ.
ಪಾಕಿಸ್ತಾನಿ ಸಚಿವರ ಹೇಳಿಕೆಗಳನ್ನು ಉಲ್ಲೇಖಿಸಿ ಬಿಜೆಪಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಇದು ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪಾಕಿಸ್ತಾನದ ಅಜೆಂಡಾವನ್ನು ಈ ಹೇಳಿಕೆ ದೃಢಪಡಿಸಿದೆ ಎಂದಿದೆ.
ಎಕ್ಸ್ ಪೋಸ್ಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು, ಹಳೆಯ ಪಕ್ಷ ಮತ್ತು ಪಾಕಿಸ್ತಾನವು ಒಂದೇ ಉದ್ದೇಶಗಳು ಮತ್ತು ಕಾರ್ಯಸೂಚಿಯನ್ನು ಹೊಂದಿವೆ ಎಂದು ಮತ್ತೊಮ್ಮೆ ಸ್ಪಷ್ಟಗೊಂಡಿದೆ ಎಂದು ಹೇಳಿದರು.
ರಾಹುಲ್ ಪ್ರತಿ ಭಾರತ ವಿರೋಧಿ ಶಕ್ತಿಯೊಂದಿಗೆ ನಿಂತಿದ್ದಾರೆ, ದೇಶವಾಸಿಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದಿದ್ದಾರೆ.
“ಕಲಂ 370 ಮತ್ತು 35 ಎ ಕುರಿತು ಕಾಂಗ್ರೆಸ್ ಮತ್ತು ಜೆಕೆಎನ್ಸಿ ಬೆಂಬಲದ ಬಗ್ಗೆ ಪಾಕಿಸ್ತಾನದ ರಕ್ಷಣಾ ಸಚಿವರ ಹೇಳಿಕೆಯು ಮತ್ತೊಮ್ಮೆ ಕಾಂಗ್ರೆಸ್ ಅನ್ನು ಬಹಿರಂಗಪಡಿಸಿದೆ. ಈ ಹೇಳಿಕೆಯು ಮತ್ತೊಮ್ಮೆ ಕಾಂಗ್ರೆಸ್ ಮತ್ತು ಪಾಕಿಸ್ತಾನದ ಉದ್ದೇಶಗಳು ಮತ್ತು ಕಾರ್ಯಸೂಚಿಗಳನ್ನು ಒಂದೇ ಎಂದು ಸ್ಪಷ್ಟಪಡಿಸಿದೆ. ಕಳೆದ ಕೆಲವು ವರ್ಷಗಳಿಂದ ರಾಹುಲ್ ಗಾಂಧಿ ಪ್ರತಿ ಭಾರತ ವಿರೋಧಿ ಶಕ್ತಿಯೊಂದಿಗೆ ನಿಂತು, ದೇಶವಾಸಿಗಳ ಭಾವನೆಗಳಿಗೆ ಧಕ್ಕೆಯುಂಟುಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಪಾಕಿಸ್ತಾನವು ಕೇಂದ್ರದಲ್ಲಿ ಮೋದಿ ಸರ್ಕಾರವಿದೆ ಎಂಬುದನ್ನು ಮರೆತುಬಿಟ್ಟಿರುವ ಹಾಗಿದೆ. ಆ 370 ನೇ ವಿಧಿಯಾಗಲೀ ಅಥವಾ ಭಯೋತ್ಪಾದನೆಯಾಗಲೀ ಕಾಶ್ಮೀರದಲ್ಲಿ ಮತ್ತೆ ಎಂದಿಗೂ ಹಿಂತಿರುಗುವುದಿಲ್ಲ” ಎಂದು ಶಾ ಹೇಳಿದ್ದಾರೆ.
पाकिस्तान के रक्षा मंत्री का आर्टिकल 370 और 35A पर कांग्रेस और JKNC के समर्थन की बात ने एक बार फिर कांग्रेस को एक्सपोज कर दिया है। इस बयान ने पुनः यह स्पष्ट कर दिया है कि कांग्रेस और पाकिस्तान के इरादे भी एक हैं और एजेंडा भी। पिछले कुछ वर्षों से राहुल गाँधी देशवासियों की भावनाओं…
— Amit Shah (@AmitShah) September 19, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.