ಢಾಕಾ: ಬಾಂಗ್ಲಾದೇಶದಲ್ಲಿ ಹೊಸದಾಗಿ ರಚನೆಯಾದ ಮಧ್ಯಂತರ ಸರ್ಕಾರವು ಆಜಾನ್ ಮತ್ತು ನಮಾಜ್ ಸಮಯದಲ್ಲಿ ದುರ್ಗಾ ಪೂಜೆಗೆ ಸಂಬಂಧಿಸಿದ ಕೈಂಕರ್ಯಗಳನ್ನು, ವಿಶೇಷವಾಗಿ ಸಂಗೀತ ನುಡಿಸುವಿಕೆಯನ್ನು ನಿಲ್ಲಿಸುವಂತೆ ಹಿಂದೂ ಸಮುದಾಯಕ್ಕೆ ಕರೆ ನೀಡಿದೆ. ಈ ಮೂಲಕ ತಾನೆಷ್ಟು ಜಾತ್ಯಾತೀತನಾಗಿದ್ದೇನೆ ಎಂಬುದನ್ನು ನೋಬೆಲ್ ಪುರಸ್ಕೃತ ಮೊಹಮ್ಮದ್ ಯೂನಸ್ ನೇತೃತ್ವದ ಸರ್ಕಾರ ಸ್ಪಷ್ಟಪಡಿಸಿದೆ.
ಅಲ್ಲಿನ ಗೃಹ ವ್ಯವಹಾರಗಳ ಸಲಹೆಗಾರ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಎಂಡಿ ಜಹಾಂಗೀರ್ ಆಲಂ ಚೌಧರಿ ಅವರು ಈ ಬಗ್ಗೆ ಘೋಷಣೆ ಮಾಡಿದ್ದು, ಆಜಾನ್, ನಮಾಜ್ ವೇಳೆ ಸಂಗೀತ ವಾದ್ಯಗಳು ಮತ್ತು ಧ್ವನಿ ವ್ಯವಸ್ಥೆಗಳನ್ನು ಸ್ವಿಚ್ ಆಫ್ ಮಾಡಲು ದುರ್ಗಾ ಪೂಜಾ ಸಮಿತಿಗಳನ್ನು ಕೇಳಲಾಗಿದೆ ಮತ್ತು ಅವರು ಒಪ್ಪಿದ್ದಾರೆ ಎಂದಿದ್ದಾರೆ.
“ನಮಾಜ್ ಮಾಡುವ ಸಮಯದಲ್ಲಿ ಇಂತಹ ಚಟುವಟಿಕೆಗಳನ್ನು ನಿಲ್ಲಿಸಬೇಕು ಮತ್ತು ಅಜಾನ್ಗೆ ಐದು ನಿಮಿಷಗಳ ಮೊದಲೇ ಇದನ್ನು ಪಾಳಿಸಬೇಕು ಅನುಸರಿಸಬೇಕಾಗುತ್ತದೆ” ಎಂದಿದ್ದಾರೆ. ಬಾಂಗ್ಲಾದೇಶದ ಹಿಂದೂ ಸಮುದಾಯದ ಅತಿದೊಡ್ಡ ಧಾರ್ಮಿಕ ಹಬ್ಬವಾದ ದುರ್ಗಾ ಪೂಜೆಯ ಮೊದಲು ದೇಶದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಸಭೆ ನಡೆಸಿದ ನಂತರ ಈ ಘೋಷಣೆಗಳನ್ನು ಅವರು ಮಾಡಿದ್ದಾರೆ
ಈ ವರ್ಷ ಬಾಂಗ್ಲಾದೇಶಾದ್ಯಂತ ಒಟ್ಟು 32,666 ಪೂಜಾ ಮಂಟಪಗಳನ್ನು ನಿರ್ಮಿಸಲಾಗುತ್ತಿದೆ . ಇವುಗಳಲ್ಲಿ 157 ಮಂಟಪಗಳು ಢಾಕಾ ಸೌತ್ ಸಿಟಿಯಲ್ಲಿ ಮತ್ತು 88 ನಾರ್ತ್ ಸಿಟಿ ಕಾರ್ಪೊರೇಷನ್ಗಳಲ್ಲಿ ಇರುತ್ತವೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
ಅದೇನೆಯಿರಲಿ ಒಂದು ಸಮುದಾಯ ಪ್ರಾರ್ಥನೆ ಸಲ್ಲಿಸುವ ವೇಳೆ ಇನ್ನೊಂದು ಸಮುದಾಯ ತನ್ನ ಧಾರ್ಮಿಕ ಚಟುವಟಿಕೆಗಳನ್ನು ಸ್ತಬ್ದಗೊಳಿಸಬೇಕು ಎಂಬ ನಿಯಮ ವಿಚಿತ್ರವಾಗಿ ಕಾಣುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.