ನವದೆಹಲಿ: ಭಾರತೀಯ ಆಕಾಶವು ಈಗ ಹೆಚ್ಚು ಸುರಕ್ಷಿತವಾಗುತ್ತಿದೆ ಎಂದು ನಾಗರಿಕ ವಿಮಾನಯಾನ ನಿಯಂತ್ರಕ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ನ ಅಂಕಿಅಂಶಗಳು ಹೇಳಿವೆ. ಸುರಕ್ಷತಾ ಕಾರ್ಯಕ್ರಮದ ಮೇಲಿನ ನಿರಂತರ ಹೂಡಿಕೆ ಮತ್ತು ನಿಯಂತ್ರಕರ ನಿಯಮಿತ ಕಣ್ಗಾವಲು ವಾಯುಯಾನವನ್ನು ಹೆಚ್ಚು ಸುರಕ್ಷಿತಗೊಳಿಸಿದೆ.
2023 ರಲ್ಲಿ ಭಾರತದಾದ್ಯಂತ ವಿಮಾನ ಪ್ರಯಾಣವು ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ಸಾಕಷ್ಟು ಸುರಕ್ಷಿತವಾಗಿದೆ. ಡಿಜಿಸಿಎ ಬುಧವಾರ 2023 ರ ವಾರ್ಷಿಕ ಸುರಕ್ಷತಾ ವಿಮರ್ಶೆಯನ್ನು ಅನಾವರಣಗೊಳಿಸಿದ್ದು, ಇದು ವಾಯು ಸುರಕ್ಷತೆಯ ವಿಷಯದಲ್ಲಿ ಭಾರತದ ಅಮೋಘ ಸಾಧನೆಯನ್ನು ಪ್ರದರ್ಶಿಸಿದೆ.
ವಿಮಾವ ಅವಘಢಗಳಲ್ಲಿ ಭಾರೀ ಕುಸಿತವಾಗಿದೆ. ಇದು ವಿಮಾನ ಇಳಿಯುವಿಕೆಯ ಬಗೆಗಿನ ಸುರಕ್ಷತಾ ಪ್ರೋಟೋಕಾಲ್ಗಳಲ್ಲಿ ಪ್ರಮುಖ ವರ್ಧನೆಯನ್ನು ಒತ್ತಿಹೇಳುತ್ತದೆ. DGCA ಯ ವಾರ್ಷಿಕ ಸುರಕ್ಷತಾ ವಿಮರ್ಶೆ-2023 ಈ ಗಮನಾರ್ಹ ಸಾಧನೆಗಳನ್ನು ಎತ್ತಿ ತೋರಿಸುವುದಲ್ಲದೆ ರಾಷ್ಟ್ರೀಯ ವಾಯುಯಾನ ಸುರಕ್ಷತಾ ಕಾರ್ಯತಂತ್ರದ ಪರಿಣಾಮಕಾರಿತ್ವವನ್ನು ಪುನರುಚ್ಚರಿಸಿದೆ.
2023 ಭಾರತದಲ್ಲಿ ವಾಯುಯಾನ ಸುರಕ್ಷತೆಯ ಹೊಸ ಯುಗವನ್ನು ಆರಂಭಿಸಿದೆ, ಅಪಾಯಗಳನ್ನು ತಗ್ಗಿಸಲು ಮತ್ತು ಭಾರತದ ಮೇಲಿನ ಆಕಾಶದ ಸುರಕ್ಷತೆಯನ್ನು ಹೆಚ್ಚಿಸಲು ಅತ್ಯಾಧುನಿಕ ಮತ್ತು ಡೇಟಾ-ಚಾಲಿತ ವಿಧಾನವನ್ನು ಪ್ರತಿಬಿಂಬಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.