ಹೈದರಾಬಾದ್: ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯಲ್ಲಿ ನಕ್ಸಲರೊಂದಿಗಿನ ಭೀಕರ ಎನ್ಕೌಂಟರ್ನಲ್ಲಿ ಆರು ನಕ್ಸಲರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಗುರುವಾರ ಬೆಳಗ್ಗೆ ಗುಂಡಿನ ಚಕಮಕಿ ನಡೆದಿದೆ.
ಭದ್ರಾದ್ರಿ ಕೊತಗುಡೆಂ ಜಿಲ್ಲಾ ವರಿಷ್ಠಾಧಿಕಾರಿ ರೋಹಿತ್ ರಾಜ್ ಘಟನೆಯನ್ನು ಖಚಿತಪಡಿಸಿದ್ದು, “ಇಂದು ಬೆಳಗ್ಗೆ ಪೊಲೀಸರು ಮತ್ತು ನಕ್ಸಲರ ನಡುವೆ ಎನ್ಕೌಂಟರ್ ನಡೆದಿದೆ” ಎಂದು ಹೇಳಿದ್ದಾರೆ. ಕಾ
ಬುಧವಾರ, ಮತ್ತೊಂದು ಎನ್ಕೌಂಟರ್ನಲ್ಲಿ ಹತರಾದ ಒಂಬತ್ತು ನಕ್ಸಲರ ಶವಗಳನ್ನು ಛತ್ತೀಸ್ಗಢದ ದಾಂತೇವಾಡ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು. ಈ ಎನ್ಕೌಂಟರ್ ದಾಂತೇವಾಡ ಮತ್ತು ಬಿಜಾಪುರ ನಡುವಿನ ಅರಣ್ಯದಲ್ಲಿ ನಡೆದಿತ್ತು, ಅಲ್ಲಿ ಭದ್ರತಾ ಪಡೆಗಳು ಒಂಬತ್ತು ನಕ್ಸಲರನ್ನು ಸಂಹರಿಸಿವೆ ಮತ್ತು ಹಲವಾರು ರೈಫಲ್ಗಳನ್ನು ವಶಪಡಿಸಿಕೊಂಡಿವೆ. ದಾಂತೇವಾಡ ಎಸ್ಪಿ ಗೌರವ್ ರೈ ಮಾಹಿತಿ ನೀಡಿ, ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದಿದ್ದಾರೆ. ಘಟನೆಯ ನಂತರ, ಛತ್ತೀಸ್ಗಢ ಸಿಎಂ ವಿಷ್ಣು ದೇವ್ ಸಾಯಿ ಸೈನಿಕರ ಶೌರ್ಯವನ್ನು ಶ್ಲಾಘಿಸಿದ್ದು, ನಕ್ಸಲಿಸಂ ನಿರ್ಮೂಲನೆಗೆ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದರು.
ಈ ವರ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾರ್ಚ್ 2026 ರೊಳಗೆ ಎಡಪಂಥೀಯ ಉಗ್ರವಾದವನ್ನು ತೊಡೆದುಹಾಕಲು ಸರ್ಕಾರದ ಗುರಿಯನ್ನು ಪುನರುಚ್ಚರಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಉಗ್ರವಾದದ ವಿರುದ್ಧದ ಹೋರಾಟವು ಅಂತಿಮ ಹಂತವನ್ನು ತಲುಪುತ್ತಿದೆ ಎಂದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.