ನವದೆಹಲಿ: ವಿಶ್ವದ ಮೊದಲ ಖಂಡಾಂತರ ಚೀತಾ ಸ್ಥಳಾಂತರದ ಭಾಗವಾಗಿ ಭಾರತಕ್ಕೆ ತರಲಾದ ಆಫ್ರಿಕನ್ ಚೀತಾಗಳು ಇನ್ನು ಮುಂದೆ ಕಾಡಿನಲ್ಲಿ ಸ್ವಚ್ಛಂದವಾಗಿ ಸಂಚಾರ ನಡೆಸಲಿವೆ. ಇದುವರೆಗೆ ಮಧ್ಯಪ್ರದೇಶ ಕುನೋ ರಾಷ್ಟ್ರೀಯ ಉದ್ಯಾಣವನದಲ್ಲಿ ಅವುಗಳು ಪ್ರತ್ಯೇಕವಾಸದಲ್ಲಿ ಇದ್ದವು.
ಚೀತಾಗಳನ್ನು ಶೀಘ್ರದಲ್ಲೇ ಕಾಡಿಗೆ ಬಿಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಆರೋಗ್ಯ ತಪಾಸಣೆ ಮತ್ತು ಮೇಲ್ವಿಚಾರಣೆಗಾಗಿ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಒಂದು ವರ್ಷದಿಂದ ಇವುಗಳು ವಾಸಿಸುತ್ತಿವೆ.
ದೇಶದ ಮಧ್ಯ ಭಾಗಗಳಲ್ಲಿ ಮಾನ್ಸೂನ್ ಅಬ್ಬರ ಕಡಿಮೆಯಾದ ನಂತರ ಈ ಆಫ್ರಿಕನ್ ಚೀತಾಗಳು ಮತ್ತು ಅವುಗಳ ಮರಿಗಳನ್ನು ಹಂತ ಹಂತವಾಗಿ ಕಾಡಿಗೆ ಬಿಡಲು ಕೇಂದ್ರದ ಚೀತಾ ಪ್ರಾಜೆಕ್ಟ್ ಸ್ಟೀರಿಂಗ್ ಸಮಿತಿ ಶುಕ್ರವಾರ ನಿರ್ಧರಿಸಿದೆ.
“ಸಮಿತಿಯ ಸದಸ್ಯರು ಮತ್ತು ಎನ್ಟಿಸಿಎ (ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ) ಅಧಿಕಾರಿಗಳು ಕುನೊಗೆ ಭೇಟಿ ನೀಡಿ ಚೀತಾಗಳನ್ನು ಬಿಡುವ ಸಮಯದ ಬಗ್ಗೆ ಚರ್ಚಿಸಿದರು. ಮಳೆ ಮುಗಿದ ನಂತರ ವಯಸ್ಕ ಚಿರತೆಗಳನ್ನು ಹಂತ ಹಂತವಾಗಿ ಕಾಡಿಗೆ ಬಿಡಲಾಗುವುದು, ಆದರೆ ಮರಿಗಳು ಮತ್ತು ಅವುಗಳ ತಾಯಂದಿರನ್ನು ಡಿಸೆಂಬರ್ ನಂತರ ಬಿಡುಗಡೆ ಮಾಡಲಾಗುವುದು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಟ್ಟು 25 ಚೀತಾಗಳು ಇದ್ದು, ಇವುಗಳಲ್ಲಿ 13 ವಯಸ್ಕವು ಮತ್ತು 12 ಮರಿಗಳು, ಎಲ್ಲಾ ಚೀತಾಗಳು ಆರೋಗ್ಯಪೂರ್ಣವಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಮೀಬಿಯಾದಿಂದ ಎಂಟು ಚಿರತೆಗಳ ಮೊದಲ ಬ್ಯಾಚ್ ಅನ್ನು ಸೆಪ್ಟೆಂಬರ್ 2022 ರಲ್ಲಿ ಭಾರತಕ್ಕೆ ತರಲಾಯಿತು ಮತ್ತು 12 ಚೀತಾಗಳ ಎರಡನೇ ಬ್ಯಾಚ್ ಅನ್ನು ಕಳೆದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ತರಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.