ನವದೆಹಲಿ: ಬಾಂಗ್ಲಾದೇಶದಲ್ಲಿನ ಅರಾಜಕತೆ ಅಲ್ಲಿನ ಹಿಂದೂಗಳ ಬದುಕನ್ನು ನರಕ ಸದೃಶ್ಯಗೊಳಿಸಿದೆ. ಜೀವ ಭಯದಿಂದಾಗಿ ಅಲ್ಲಿನ ನೂರಾರು ಹಿಂದೂಗಳು ಭಾರತಕ್ಕೆ ಬರಲು ಮುಂದಾಗುತ್ತಿದ್ದಾರೆ. ಈಗಾಗಲೇ ಭಾರತದ ಗಡಿಯಲ್ಲಿ ಅನೇಕರು ಜಮಾಯಿಸಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ಶೇಖ್ ಹಸೀನಾ ಅವರನ್ನು ಹೊರಹಾಕಿದ ನಂತರ ಹಿಂದೂಗಳ ಒಡೆತನದ ಕೆಲವು ವ್ಯಾಪಾರ ಮಳಿಗೆಗಳು ಮತ್ತು ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಹಿಂದೂಗಳು ಶೇಖ್ ಹಸೀನಾ ಅವರ ಪರ ಇದ್ದರು ಎಂಬ ಕಾರಣಕ್ಕೆ ಹಿಂದೂ ಸಮುದಾಯವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
“ನೂರಾರು ಬಾಂಗ್ಲಾದೇಶಿ ಪ್ರಜೆಗಳು, ಹೆಚ್ಚಾಗಿ ಹಿಂದೂಗಳು, ಬಾಂಗ್ಲಾದೇಶದೊಂದಿಗಿನ ಭಾರತದ ಗಡಿಯುದ್ದಕ್ಕೂ ವಿವಿಧ ಕಡೆಗಳಲ್ಲಿ ಜಮಾಯಿಸಿದ್ದಾರೆ” ಎಂದು ಭಾರತದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಅಮಿತ್ ಕುಮಾರ್ ತ್ಯಾಗಿ ಮಾಹಿತಿ ನೀಡಿದ್ದಾರೆ.
ಪಶ್ಚಿಮಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಬಾಂಗ್ಲಾದೇಶಿಗಳು ಯಾರೂ ಇಲ್ಲದ ಪ್ರದೇಶದಲ್ಲಿ ಜಮಾಯಿಸಿದ್ದಾರೆ. ಇಲ್ಲಿ ಬೇಲಿ ಇಲ್ಲದ ಕಾರಣ ಬಿಎಸ್ಎಫ್ ಸಿಬ್ಬಂದಿ ಮಾನವ ಕವಚ ನಿರ್ಮಿಸಿದ್ದಾರೆ. ಗುಂಪನ್ನು ಚದುರಿಸಲು ಅಧಿಕಾರಿಗಳು ಗಾಳಿಯಲ್ಲಿ ಖಾಲಿ ಗುಂಡು ಹಾರಿಸಿದ್ದಾರೆ ಎಂದು ತ್ಯಾಗಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.