ನವದೆಹಲಿ: ಹಿರಿಯ ಸಿಬಿಐ ಅಧಿಕಾರಿಗಳ ಹೆಸರು ಮತ್ತು ಹುದ್ದೆಗಳನ್ನು ದುರ್ಬಳಕೆ ಮಾಡಿಕೊಂಡು ಹಗರಣಗಳನ್ನು ನಡೆಸಲಾಗುತ್ತಿರುವ ಬಗ್ಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ನಾಗರಿಕರಿಗೆ ಎಚ್ಚರಿಕೆ ನೀಡಿದೆ.
ಸಿಬಿಐ ನಿರ್ದೇಶಕರು ಸೇರಿದಂತೆ ಸಿಬಿಐ ಅಧಿಕಾರಿಗಳ ಸಹಿಯನ್ನು ಹೊಂದಿರುವ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಕಲಿ ವಾರಂಟ್ಗಳು / ಸಮನ್ಸ್ಗಳನ್ನು ನೀಡುವ ಮೂಲಕ ನಾಗರಿಕರನ್ನು ವಂಚನೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದೆ. ವಿಶೇಷವಾಗಿ ಇಂಟರ್ನೆಟ್ / ಇಮೇಲ್ಗಳು / ವಾಟ್ಸಾಪ್ ಇತ್ಯಾದಿಗಳಲ್ಲಿ ನಾಗರಿಕರಿಂದ ಹಣವನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
“ದಯವಿಟ್ಟು ಸಿಬಿಐ ಹಿರಿಯ ಅಧಿಕಾರಿಗಳ ಹೆಸರು ಮತ್ತು ಸಹಿಗಳನ್ನು ದುರ್ಬಳಕೆ ಮಾಡಿಕೊಳ್ಳುವ ಹಗರಣಗಳ ಬಗ್ಗೆ ಎಚ್ಚರದಿಂದಿರಿ. ಸಿಬಿಐ ನಿರ್ದೇಶಕರು ಸೇರಿದಂತೆ ಸಿಬಿಐ ಅಧಿಕಾರಿಗಳ ಸಹಿಯನ್ನು ಹೊಂದಿರುವ ನಕಲಿ ದಾಖಲೆಗಳು ನಕಲಿ ವಾರಂಟ್ಗಳು / ಸಮನ್ಸ್ಗಳೊಂದಿಗೆ ವಂಚನೆಗಳನ್ನು ಮಾಡಲು ವಿಶೇಷವಾಗಿ ಇಂಟರ್ನೆಟ್, ಇಮೇಲ್ಗಳು, ವಾಟ್ಸಾಪ್ ಇತ್ಯಾದಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಾರ್ವಜನಿಕವಾಗಿ ಲಭ್ಯವಿರುವ ಸಿಬಿಐ ಲಾಂಛನವನ್ನು ಕೆಲವು ಕ್ರಿಮಿನಲ್ಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ಮುಖ್ಯವಾಗಿ ವಾಟ್ಸಾಪ್ ಮೂಲಕ ಹಣ ವಸೂಲಿ ಮಾಡಲಾಗುತ್ತಿದೆ ಮತ್ತು ಅಂತಹ ಯಾವುದೇ ಪ್ರಯತ್ನಗಳಿಗೆ ಬಲಿಯಾಗದಂತೆ ತಕ್ಷಣ ಸ್ಥಳೀಯ ಪೊಲೀಸರಿಗೆ ತಿಳಿಸಬೇಕು” ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ಇತ್ತೀಚೆಗಷ್ಟೇ ಕಸ್ಟಮ್ಸ್ ಇಲಾಖೆಯೂ ಇದೇ ಎಚ್ಚರಿಕೆಯನ್ನು ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.