ಲಂಡನ್: ಮುಂದಿನ ತಿಂಗಳು ಲಂಡನ್ಗೆ ಭೇಟಿ ಕೊಡಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಅದ್ದೂರಿಯಾಗಿ ಸ್ವಾಗತಿಸಲು ಅಲ್ಲಿನ ಭಾರತೀಯ ಸಮುದಾಯ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ನವೆಂಬರ್ 11 ರಿಂದ 13ರ ರವರೆಗೆ ಲಂಡನ್ ಪ್ರವಾಸ ಮಾಡುವ ಪ್ರಧಾನಿ, ಇಲ್ಲಿನ ಪ್ರಸಿದ್ಧ ವೆಂಬ್ಲೇ ಫುಟ್ಬಾಲ್ ಕ್ರೀಡಾಂಗಣದಲ್ಲಿ 13 ರಂದು ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಈಗಾಗಲೇ ಅಲ್ಲಿನ 450 ಕ್ಕೂ ಅಧಿಕ ಭಾರತೀಯ ಮೂಲದ ಸಂಘಟನೆಗಳು ಸಭೆ ಸೇರಿ ಸಮಾರಂಭದ ರೂಪುರೇಶೆಯ ಬಗ್ಗೆ ಮಾತುಕತೆ ನಡೆಸಿದೆ.
70 ಸಾವಿರ ಜನರು ಸೇರುವ ನಿರೀಕ್ಷೆ ಇದ್ದು, ಪ್ರತಿಯೊಬ್ಬರೂ ತಮ್ಮ ಪಾಸ್ಪೋರ್ಟ್ ಮತ್ತು ಪ್ರವೇಶ ಪತ್ರ ತರುವುದು ಕಡ್ಡಾಯವಾಗಿದೆ. ಹಲವಾರು ಶ್ರೀಮಂತರು ಈ ಕಾರ್ಯಕ್ರಮಕ್ಕೆ ಹಣ ನೀಡಲು ಮುಂದೆ ಬಂದಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.