ಮಾಸ್ಕೊ: ರಷ್ಯಾವು ದುಷ್ಟ ಇಸ್ಲಾಮಿಕ್ ಸ್ಟೇಟ್ (ಇಸಿಸ್)ಸಂಘಟನೆಯನ್ನು ಅಳಿಸಿ ಹಾಕಲು ಸಿರಿಯಾಗೆ 1,50,000 ಪಡೆಗಳನ್ನು ಕಳುಹಿಸಲು ತಯಾರಿ ನಡೆಸುತ್ತಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪುಟಿನ್ ಅವರು ರಕ್ಕಾ ಪ್ರದೇಶದ ಉಗ್ರರನ್ನು ಹಿಡಿತದಲ್ಲಿಡಲು ಪ್ರಬಲ ಸೇನಾ ಪಡೆಯನ್ನು ಸಜ್ಜುಗೊಳಿಸುತ್ತಿದೆ. ಸಿರಿಯಾದ ಈ ಪ್ರದೇಶವು ಇಸಿಸ್ನ ಸ್ವಯಂಘೋಷಿತ ರಾಜಧಾನಿಯಾಗಿದ್ದು, ಸುಮಾರು 5,000ಕ್ಕೂ ಅಧಿಕ ಜಿಹಾದಿ ಸದಸ್ಯರು ಇಲ್ಲಿ ಮೊಕ್ಕಾಂ ಹೂಡಿದ್ದಾರೆ.
ರಷ್ಯಾ ಪಶ್ಚಿಮ ಸಿರಿಯಾದ ರಕ್ಕಾ ಹಾಗೂ ಪಲ್ಮೈರಾ ಪ್ರದೇಶದ ತೈಲ ಮತ್ತು ಅನಿಲ ಸಂಪನ್ಮೂಲಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಬಯಸುತ್ತಿರುವುದು ಸ್ಪಷ್ಟವಾಗಿದೆ ಎಂದು ವಕ್ತಾರರೋರ್ವರು ತಿಳಿಸಿದ್ದಾರೆ.
ರಷ್ಯಾ ತನ್ನ ಸುಖೋಯ್ ಸು-34 ಮತ್ತು ಸು-34ಎಂ ಜೆಟ್ಗಳನ್ನು ಬಳಸಿ ಇಸಿಸ್ನ 9 ಔಟ್ಪೋಸ್ಟ್ಗಳನ್ನು, ಬಂಕರ್ಗಳನ್ನು ವಿಧ್ವಂಸಕ ಬಾಂಬ್ಗಳ ಸಹಾಯದಿಂದ ಧ್ವಂಸಗೊಳಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.