ಇಟಾನಗರ: ಅರುಣಾಚಲ ಪ್ರದೇಶದ ಗವರ್ನರ್ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಕೆ ಟಿ ಪರ್ನಾಯಕ್ ಅವರು ವೀರ ಚಕ್ರ ಪ್ರಶಸ್ತಿ ಪುರಸ್ಕೃತ, ದಿವಂಗತ ಕರ್ನಲ್ ಎಂ ಬಿ ರವೀಂದ್ರನಾಥ್ ಅವರು ಬರೆದ ಕಾರ್ಗಿಲ್ ಯುದ್ಧದ ಬಗೆಗಿನ ಪುಸ್ತಕವನ್ನು ಬುಧವಾರ ಬಿಡುಗಡೆ ಮಾಡಿದರು.
‘ಕಾರ್ಗಿಲ್ ವಾರ್: ದಿ ಟರ್ನಿಂಗ್ ಪಾಯಿಂಟ್’ ಎಂಬ ಶೀರ್ಷಿಕೆಯ ಪುಸ್ತಕವನ್ನು ಬೆಂಗಳೂರಿನ ರಾಜೇಂದ್ರ ಸಿಂಗ್ಜಿ ಆರ್ಮಿ ಆಫೀಸರ್ಸ್ ಇನ್ಸ್ಟಿಟ್ಯೂಟ್ನಲ್ಲಿರುವ ಕರಿಯಪ್ಪ ಸಭಾಂಗಣದಲ್ಲಿ ಪರ್ನಾಯಕ್ ಬಿಡುಗಡೆ ಮಾಡಿದ್ದಾರೆ
ರಜಪೂತಾನ ರೈಫಲ್ಸ್ನ 2 ನೇ ಬೆಟಾಲಿಯನ್ನ ಕಮಾಂಡಿಂಗ್ ಆಫೀಸರ್ ಆಗಿದ್ದ ಲೇಖಕರು, 1999 ರ ಮೇ ನಿಂದ ಜುಲೈ ವರೆಗೆ ಆಪರೇಷನ್ ವಿಜಯ್ ಸಮಯದಲ್ಲಿ ಅವರ ಬೆಟಾಲಿಯನ್ ಕಾರ್ಯಾಚರಣೆಗಳ ಒಳನೋಟವನ್ನು ಪುಸ್ತಕದಲ್ಲಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಗವರ್ನರ್ ಪರ್ನಾಯಕ್ ಅವರು, ಭಾರತೀಯ ಸೇನೆಯ ಶೌರ್ಯ ಮತ್ತು ಯುದ್ಧದ ಆಳವಾದ ನಿರೂಪಣೆಗಾಗಿ ಕರ್ನಲ್ ಎಂ ಬಿ ರವೀಂದ್ರನಾಥ್ ಅವರನ್ನು ಶ್ಲಾಘಿಸಿದರು. ಪುಸ್ತಕ ಹೊರತರುವಲ್ಲಿ ಕರ್ನಲ್ ರವೀಂದ್ರನಾಥ್ ಅವರ ಪತ್ನಿ ಅನಿತಾ ರವೀಂದ್ರನಾಥ್ ಮತ್ತು 2 RAJ RIF ನ ಅಧಿಕಾರಿಗಳ ಕೊಡುಗೆಯನ್ನು ಶ್ಲಾಘಿಸಿದರು.
ಪುಸ್ತಕವು ಯುದ್ಧ ವಲಯದ ಪ್ರತ್ಯಕ್ಷ ವರದಿಯಾಗಿದೆ ಮತ್ತು ರೆಜಿಮೆಂಟ್ನ ಅಧಿಕಾರಿಗಳು ಮತ್ತು ಪಡೆಗಳ ಕುಶಾಗ್ರಮತಿ ಮತ್ತು ಶೌರ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.