ಇಸ್ಲಾಮಾಬಾದ್: ಪಾಕಿಸ್ತಾನವು ಅನಿಶ್ಚಿತ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಆ ದೇಶದ ಭಾರತ ವಿರೋಧಿ ನೀತಿಗಳೇ ಆ ದೇಶವನ್ನು ಬೆಳೆಯಲು ಬಿಡುತ್ತಿಲ್ಲ ಎಂದು ಅಲ್ಲಿನ ಕೆಲವು ನಾಯಕರು ಅರಿತುಕೊಂಡಿದ್ದಾರೆ. ಈ ವರ್ಷ ಫೆಬ್ರವರಿಯಲ್ಲಿ ಪಾಕಿಸ್ಥಾನ ಚುನಾವಣೆಯನ್ನು ಎದುರಿಸಿತ್ತು ಮತ್ತು ಪ್ರಚಾರದ ಸಮಯದಲ್ಲಿಯೂ ಸಹ, ನವಾಜ್ ಷರೀಫ್ ಮತ್ತು ಇಮ್ರಾನ್ ಖಾನ್ ಅವರಂತಹ ನಾಯಕರು ಪಾಕಿಸ್ತಾನವನ್ನು ಭಾರತದೊಂದಿಗೆ ಹೋಲಿಸುವ ಹೇಳಿಕೆಗಳನ್ನು ನೀಡಿದರು. ಈ ಹಿಂದೆ, ಅಲ್ಲಿನ ನಾಯಕರು ಚುನಾವಣೆಯನ್ನು ಗೆಲ್ಲಲು ಭಾರತಕ್ಕೆ ಬೆದರಿಕೆಗಳನ್ನು ಹಾಕುತ್ತಿದ್ದರು, ಆದರೆ ಈಗ ಅವರು ಭಾರತದ ಬೆಳವಣಿಗೆಯ ಕಥೆಯಿಂದ ಸ್ಫೂರ್ತಿ ಪಡೆಯಲು ಬಯಸುತ್ತಿದ್ದಾರೆ.
ಇತ್ತೀಚಿನ ಬೆಳವಣಿಗೆಯಲ್ಲಿ, ಪಾಕಿಸ್ತಾನದ ಬಲಪಂಥೀಯ ಇಸ್ಲಾಮಿಕ್ ನಾಯಕ ಮೌಲಾನಾ ಫಜ್ಲುರ್ ರೆಹಮಾನ್ ಅವರು ಆ ದೇಶದ ಸಂಸತ್ತಿನಲ್ಲಿ ಬಿರುಸಿನ ಭಾಷಣ ಮಾಡಿ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದರು, ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಮತ್ತು ಆರ್ಥಿಕ ಸ್ಥಿತಿಯ ಬಗ್ಗೆ ಪಾಕಿಸ್ಥಾನಕ್ಕೆ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ.
ಭಾರತ ಮತ್ತು ಪಾಕಿಸ್ಥಾನ ಒಂದೇ ದಿನ ಸ್ವಾತಂತ್ರ್ಯ ಪಡೆದವು ಆದರೆ ಭಾರತ ಇಂದು ಸೂಪರ್ ಪವರ್ ಆಗುವ ಕನಸು ಕಾಣುತ್ತಿದೆ. ಆದರೆ ಪಾಕಿಸ್ಥಾನ ಭಿಕ್ಷೆ ಬೇಡುತ್ತಿದೆ ಎಂದಿದ್ದಾರೆ.
ದಿವಾಳಿತನ ತಪ್ಪಿಸಲು ಪಾಕಿಸ್ತಾನ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮೊರೆ ಹೋಗುತ್ತಿದೆ ಎಂದೂ ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.