ತಿರುವನಂತಪುರಂ: ಎರಡನೇ ಹಂತದ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕೇರಳದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಚರ್ಚ್ವೊಂದು ಬಹಿರಂಗವಾಗಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದೆ.
ಪತ್ತನಂತಿಟ್ಟ ಕ್ಷೇತ್ರದ ಬಿಲೀವರ್ಸ್ ಚರ್ಚ್ ಬಿಜೆಪಿ ಅಭ್ಯರ್ಥಿ ಅನಿಲ್ ಆಂಟೋನಿ ಅವರಿಗೆ ಬೆಂಬಲ ನೀಡುವ ಮೂಲಕ ಸುದ್ದಿ ಮಾಡಿದೆ. ಕೇರಳದ ರಾಜಕೀಯ ಇತಿಹಾಸದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಚರ್ಚ್ವೊಂದು ಸಾರ್ವಜನಿಕವಾಗಿ ಬೆಂಬಲಿಸಿದ ಮೊದಲ ನಿದರ್ಶನ ಇದಾಗಿದೆ.
ತಿರುವಲ್ಲಾದಲ್ಲಿ ಬಿಲೀವರ್ಸ್ ಈಸ್ಟರ್ನ್ ಚರ್ಚ್ ಸೋಮವಾರ ಆಯೋಜಿಸಿದ್ದ ನಿರ್ಣಾಯಕ ಸಭೆಯ ನಂತರ ಅನಿಲ್ ಆಂಟೋನಿ ಅವರನ್ನು ಬೆಂಬಲಿಸುವ ನಿರ್ಧಾರವನ್ನು ಪ್ರಕಟಿಸಿತು. 100 ಕ್ಕೂ ಹೆಚ್ಚು ಪಾದ್ರಿಗಳು ಭಾಗವಹಿಸಿದ ಸಭೆಯಲ್ಲಿ, ಕೇರಳದ ಮೆಟ್ರೋಪಾಲಿಟನ್, ಮಾರ್ ಸಿಲ್ವಾನಿಯಸ್ ಮತ್ತು ಚರ್ಚ್ನ ಸಾರ್ವಜನಿಕ ಸಂಪರ್ಕ ಅಧಿಕಾರಿ (PRO) ರೆ. ಫಾದರ್ ಸಿಜೋ ಪಂಥಾಪಲ್ಲಿಲ್ ಸೇರಿದಂತೆ ಪ್ರಮುಖ ವ್ಯಕ್ತಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ, ಪತ್ತನಂತಿಟ್ಟ ಕ್ಷೇತ್ರದಿಂದ ಲೋಕಸಭೆಯ ಪ್ರತಿನಿಧಿಯಾಗಿ ಅನಿಲ್ ಆಂಟೋನಿ ಅವರ ಉಮೇದುವಾರಿಕೆಗೆ ಚರ್ಚ್ ಅಧಿಕೃತವಾಗಿ ಬೆಂಬಲವನ್ನು ಘೋಷಿಸಿತು.
ಅನಿಲ್ ಆಂಟೋನಿ ಅವರು ಕಾಂಗ್ರೆಸ್ನ ಹಾಲಿ ಸಂಸದ ಆಂಟೊ ಆಂಟೋನಿ ಮತ್ತು ಹಿರಿಯ ಸಿಪಿಎಂ ನಾಯಕ ಮತ್ತು ರಾಜ್ಯದ ಮಾಜಿ ಹಣಕಾಸು ಸಚಿವ ಥಾಮಸ್ ಐಸಾಕ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.