ನವದೆಹಲಿ: ಕುವೈಟ್ನಲ್ಲಿ ಮೊಟ್ಟಮೊದಲ ಹಿಂದಿ ರೇಡಿಯೋ ಪ್ರಸಾರ ಆರಂಭವಾಗಿದೆ. ಉಭಯ ದೇಶಗಳ ನಡುವಣ ಬಾಂಧವ್ಯದ ದ್ಯೋತಕವಾಗಿ ಇದನ್ನು ನೋಡಬಹುದು.
ಪ್ರತಿ ಭಾನುವಾರ FM 93.3 ಮತ್ತು AM 96.3 ನಲ್ಲಿ ಕುವೈತ್ ರೇಡಿಯೊದಲ್ಲಿ ಹಿಂದಿ ಕಾರ್ಯಕ್ರಮವನ್ನು ಪ್ರಾರಂಭಿಸಿದ ಕುವೈತ್ನ ಮಾಹಿತಿ ಸಚಿವಾಲಯವನ್ನು ಕುವೈತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಶ್ಲಾಘಿಸಿದೆ.
ಈ ಕ್ರಮವು ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಕುವೈತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ.
“ಕುವೈಟ್ನಲ್ಲಿ ಮೊಟ್ಟಮೊದಲ ಹಿಂದಿ ರೇಡಿಯೊ ಪ್ರಸಾರದ ಪ್ರಾರಂಭ! ಕುವೈತ್ ರೇಡಿಯೊದಲ್ಲಿ FM 93.3 ಮತ್ತು AM 96.3 ನಲ್ಲಿ ಹಿಂದಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಕ್ಕಾಗಿ ಭಾರತದ ರಾಯಭಾರ ಕಚೇರಿ ಕುವೈಟ್ ಮಾಹಿತಿ ಸಚಿವಾಲಯಲ್ಲೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತದೆ. 21 ಏಪ್ರಿಲ್ 2024 ರಿಂದ ಹಿಂದಿ ಕಾರ್ಯಕ್ರಮ ಪ್ರಸಾರವಾಗಲಿದೆ. ಇದು ಭಾರತ-ಕುವೈತ್ ಅನ್ನು ಮತ್ತಷ್ಟು ಬಲಪಡಿಸುವ ಒಂದು ಹೆಜ್ಜೆ” ಎಂದು ಕುವೈತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ.
ಸುಮಾರು 1 ಮಿಲಿಯನ್ ಬಲವನ್ನು ಹೊಂದಿರುವ ಭಾರತೀಯ ಸಮುದಾಯವು ಕುವೈತ್ನಲ್ಲಿ ಅತಿದೊಡ್ಡ ವಲಸಿಗ ಸಮುದಾಯವಾಗಿದೆ ಮತ್ತು ವಲಸಿಗ ಸಮುದಾಯಗಳಲ್ಲಿ ಮೊದಲ ಆದ್ಯತೆಯ ಸಮುದಾಯವೆಂದು ಪರಿಗಣಿಸಲಾಗಿದೆ.
📻 Start of first ever Hindi Radio broadcast in Kuwait!
Embassy of India expresses appreciation to @MOInformation for starting a Hindi programme on Kuwait Radio on FM 93.3 and AM 96.3 on every Sunday (8.30-9 pm) starting 21 April 2024, a step that will further strengthen 🇮🇳🤝🇰🇼. pic.twitter.com/6F46I5uhX8
— India in Kuwait (@indembkwt) April 21, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.