ನವದೆಹಲಿ: ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಜನರು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ ಮತ್ತು ಈ ಐತಿಹಾಸಿಕ ಸೋಲಿನ ಭಯದಿಂದಲೇ ಅವರ ಉನ್ನತ ನಾಯಕತ್ವವು ಇಂದು ಪತ್ರಿಕಾಗೋಷ್ಠಿಯನ್ನು ನಡೆಸಿ ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂಸ್ಥೆಗಳ ವಿರುದ್ಧ ವಾಗ್ದಾಳಿ ನಡೆಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಅವರು ತಮ್ಮ ಅಪ್ರಸ್ತುತತೆಗೆ ‘ಆರ್ಥಿಕ ತೊಂದರೆಗಳ’ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ, ಅವರ ದಿವಾಳಿತನವು ನೈತಿಕ ಮತ್ತು ಬೌದ್ಧಿಕವಾಗಿದೆಯೇ ಹೊರತು ಆರ್ಥಿಕವಲ್ಲ ಎಂದು ನಡ್ಡಾ ಹೇಳಿದ್ದಾರೆ.
ಕಾಂಗ್ರೆಸ್ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಬದಲು ತಮ್ಮ ತೊಂದರೆಗಳಿಗೆ ಅಧಿಕಾರಿಗಳನ್ನು ದೂಷಿಸುತ್ತಿದೆ. ಸರ್ಕಾರಿ ಸಂಸ್ಥೆಯಾಗಿರಲಿ ಅಥವಾ ದೆಹಲಿ ಹೈಕೋರ್ಟ್ ಆಗಿರಲಿ, ಅವರು ನಿಯಮಗಳನ್ನು ಪಾಲಿಸುವಂತೆ ಕಾಂಗ್ರೆಸ್ಗೆ ಕೇಳಿದ್ದಾರೆ, ಬಾಕಿ ತೆರಿಗೆಗಳನ್ನು ಪಾವತಿಸಲು ಹೇಲಿದ್ದಾರೆ ಆದರೆ ಪಕ್ಷವು ಎಂದಿಗೂ ಹಾಗೆ ಮಾಡಲಿಲ್ಲ ಎಂದರು.
ಪ್ರತಿಯೊಂದು ಕ್ಷೇತ್ರದಿಂದ, ಪ್ರತಿ ರಾಜ್ಯದಿಂದ ಮತ್ತು ಇತಿಹಾಸದ ಪ್ರತಿ ಕ್ಷಣದಿಂದ ಲೂಟಿ ಮಾಡಿದ ಪಕ್ಷಕ್ಕೆ ಆರ್ಥಿಕ ಅಸಹಾಯಕತೆಯ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ. ಬೋಫೋರ್ಸ್ ಜೀಪ್ನಿಂದ ಹಿಡಿದು ಚಾಪರ್ ಹಗರಣದವರೆಗಿನ ಎಲ್ಲಾ ಹಗರಣಗಳಿಂದ ಮಾಡಿದ ಹಣವನ್ನು ಕಾಂಗ್ರೆಸ್ ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸಬಹುದು. ಕಾಂಗ್ರೆಸ್ ಅರೆಕಾಲಿಕ ನಾಯಕರು ಭಾರತ ಪ್ರಜಾಪ್ರಭುತ್ವ ಎಂಬುದು ಸುಳ್ಳು ಎಂದು ಹೇಳುತ್ತಾರೆ- 1975 ಮತ್ತು 1977 ರ ನಡುವೆ ಕೆಲವೇ ತಿಂಗಳುಗಳವರೆಗೆ ಭಾರತದಲ್ಲಿ ಪ್ರಜಾಪ್ರಭುತ್ವ ಇರಲಿಲ್ಲ ಮತ್ತು ಆ ಸಮಯದಲ್ಲಿ ಭಾರತದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯೇ ಹೊರತು ಬೇರೆ ಯಾರೂ ಆಗಿರಲಿಲ್ಲ ಎಂದು ನಾನು ಅವರಿಗೆ ವಿನಮ್ರವಾಗಿ ನೆನಪಿಸುತ್ತೇನೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.