ನ್ಯೂಯಾರ್ಕ್: ಅಟ್ಲಾಂಟಿಕ್ ಸಾಗರದಲ್ಲಿ ದುರಂತಕ್ಕೀಡಾಗಿದ್ದ ಟೈಟಾನಿಕ್ ಹಡಗಿನ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸಿದ್ದವರಿಗೆ ಕೊನೆಯ ಬಾರಿ ಸರ್ವ್ ಮಾಡಲು ಬಳಸಲಾಗಿದ್ದ ಮೆನು ಕಾರ್ಡ್ 88 ಸಾವಿರ ಡಾಲರ್(58 ಲಕ್ಷ)ಗೆ ಹರಾಜಾಗಿದೆ.
ಪ್ರಥಮ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದ ಅಬ್ರಹಾಂ ಲಿಂಕನ್ ಸೋಲೊಮನ್ ಎಂಬವರು ಈ ಮೆನು ಕಾರ್ಡ್ನ್ನು ತಮ್ಮಲ್ಲಿ ಉಳಿಸಿಕೊಂಡಿದ್ದರು. ರಕ್ಷಣಾ ದೋಣಿಯ ಸಹಾಯದಿಂದ ಬದುಕುಳಿದವರಲ್ಲಿ ಇವರೂ ಒಬ್ಬರು. ಶ್ವೇತ ಬಣ್ಣದ ನಕ್ಷತ್ರದ ಲೋಗೋ ಹೊಂದಿರುವ ಈ ಮೆನು ಕಾರ್ಡ್ನಲ್ಲಿ ಏಪ್ರಿಲ್ 14, 1912 ಎಂದು ದಿನಾಂಕ ಮುದ್ರಿತವಾಗಿದೆ.
ಇಂಗ್ಲೆಂಡ್ನ ಸೌತ್ಹ್ಯಾಂಪ್ಟನ್ನಿಂದ ನ್ಯೂಯಾರ್ಕ್ಗೆ ಪ್ರಯಾಣಿಸಿದ್ದ ಈ ಹಡಗು ಎಪ್ರಿಲ್ 15, 1912ರಂದು ಅಟ್ಲಾಂಟಿಕ್ ಸಾಗರದಲ್ಲಿ ಮಂಜು ಗಡ್ಡೆ ಪರ್ವತಕ್ಕೆ ಡಿಕ್ಕಿ ಹೊಡೆದು ಮುಳುಗಿದ ಪರಿಣಾಮ 1500 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದರು.
ರಕ್ಷಣಾ ದೋಣಿಯ ಮೂಲಕ ರಕ್ಷಿಸಲ್ಪಟ್ಟ ಪ್ರಯಾಣಿಕರೊಬ್ಬರ ಉತ್ತರಾಧಿಕಾರಿಯೊಬ್ಬರು ಈ ಮೆನು ಕಾರ್ಡ್ನ್ನು ಕೊಳ್ಳಲು ಮುಂದಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.