ನವದೆಹಲಿ: ಹರಿಯಾಣ ನೂತನ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದ ಸರ್ಕಾರ ಬುಧವಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದೆ.
ಖಟ್ಟರ್ ಅವರ ಅನಿರೀಕ್ಷಿತ ರಾಜೀನಾಮೆಯ ನಂತರ, ಸೈನಿ ಮಂಗಳವಾರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ನಂತರ ಅವರು 48 ಶಾಸಕರ ಬೆಂಬಲದ ಪತ್ರವನ್ನು ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ಸಲ್ಲಿಸಿದರು, ತಮ್ಮ ಸ್ಥಾನವನ್ನು ಬಲಪಡಿಸಿದರು.
ಬಳಿಕ ವಿಧಾನಸಭೆಯಲ್ಲಿ ಇಂದು ವಿಶೇಷ ಅಧಿವೇಶನವನ್ನು ಕರೆದು ಬಹುಮತ ಸಾಬೀತುಪಡಿಸಲಾಗಿದೆ.
ಜನನಾಯಕ ಜನತಾ ಪಕ್ಷದ(ಜೆಜೆಪಿ) ಶಾಸಕರಾದ ದೇವೆಂದರ್ ಸಿಂಗ್ ಬಬ್ಲಿ, ರಾಮ್ ಕುಮಾರ್ ಗೌತಮ್, ಈಶ್ವರ್ ಸಿಂಗ್, ರಾಮ್ ನಿವಾಸ್ ಮತ್ತು ಜೋಗಿ ರಾಮ್ ಸಿಹಾಗ್ ಅವರು ವಿಶ್ವಾಸಮತ ಪ್ರಸ್ತಾವನೆ ಮಂಡಿಸಿದ ನಂತರ ಸದನದಿಂದ ನಿರ್ಗಮಿಸಿದರು. ಜೆಜೆಪಿ ತನ್ನ 10 ಶಾಸಕರಿಗೆ ವಿಶ್ವಾಸಮತ ಯಾಚನೆಯ ವೇಳೆ ವಿಧಾನಸಭೆಗೆ ಗೈರುಹಾಜರಾಗುವಂತೆ ವಿಪ್ ಜಾರಿ ಮಾಡಿತ್ತು. ಸದನದಲ್ಲಿ ರಾಜ್ಯದ ಮಾಜಿ ಗೃಹ ಸಚಿವ ಅನಿಲ್ ವಿಜ್ ಸಹ ಉಪಸ್ಥಿತರಿದ್ದರು.
ಪ್ರಸ್ತಾವನೆ ಕುರಿತ ಚರ್ಚೆ ವೇಳೆ ಕಾಂಗ್ರೆಸ್ ಶಾಸಕರು, ತುರ್ತು ವಿಧಾನಸಭಾ ಅಧಿವೇಶನ ಕರೆಯುವ ಅಗತ್ಯ ಏನಿತ್ತು ಎಂದು ಸ್ಪೀಕರ್ ಜಿಯಾನ್ ಚಂದ್ ಗುಪ್ತಾ ಅವರನ್ನು ಕೇಳಿದರು.
“ಯಾವುದೇ ತುರ್ತು ಪರಿಸ್ಥಿತಿ ಇರಲಿಲ್ಲ”. ಆದರೂ ತರ್ತು ಅಧಿವೇಶನ ಕರೆಯಲಾಗಿದೆ ಮತ್ತು ಶಾಸಕರಿಗೆ ಸರಿಯಾದ ಸಮಯ ನೀಡಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಹೇಳಿದರು.
ನಿನ್ನೆ ಸಂಜೆ ಪ್ರಮಾಣ ವಚನ ಸ್ವೀಕರಿಸಿದ ನಂತರ ವರದಿಗಾರರೊಂದಿಗೆ ಮಾತನಾಡಿದ್ದ ಸೈನಿ, 48 ಶಾಸಕರ ಬೆಂಬಲದ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದೇವೆ ಮತ್ತು ಬಿಜೆಪಿ ಸರ್ಕಾರ ಸದನದಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಲು ಬುಧವಾರ ವಿಧಾನಸಭೆ ಅಧಿವೇಶನ ಕರೆಯುವಂತೆ ಕೇಳಿಕೊಂಡಿದ್ದೇವೆ ಎಂದು ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.