ನವದೆಹಲಿ: ಉದ್ಯಮಿ ಮತ್ತು ಮಹೀಂದ್ರಾ & ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ತಾವು ನೀಡಿದ ಭರವಸೆಯಂತೆ ಎಲೆಕ್ಟ್ರಿಕ್ ವಾಹನವನ್ನು ಚೆಸ್ ತಾರೆ ಆರ್ ಪ್ರಗ್ನಾನಂದ ಅವರ ಪೋಷಕರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ಅವರ ಬಹುಕಾಲದ ಕನಸನ್ನು ಈಡೇರಿಸಿದ್ದಾರೆ.
ಭಾರತದ ಕಿರಿಯ ಚೆಸ್ ಗ್ರ್ಯಾಂಡ್ಮಾಸ್ಟರ್ ಆರ್ ಪ್ರಗ್ನಾನಂದ X ಪೋಸ್ಟ್ ಮಾಡಿ ವಾಹನವನ್ನು ಉಡುಗೊರೆಯಾಗಿ ನೀಡಿದ್ದಕ್ಕಾಗಿ ಆನಂದ್ ಮಹೀಂದ್ರಾ ಅವರಿಗೆ ಧನ್ಯವಾದ ಅರ್ಪಿಸಿದರು. ಚೆಸ್ ವರ್ಲ್ಡ್ ಕಪ್ ಫೈನಲ್ ತಲುಪಿದ ಅತ್ಯಂತ ಕಿರಿಯ ಆಟಗಾರನಾಗಿರುವ ಪ್ರಗ್ನಾನಂದ ಅವರ ಕುಟುಂಬವು, ಹೊಚ್ಚಹೊಸ ಮಹೀಂದ್ರಾ XUV 400 ಜೊತೆ ನಿಂತು ತೆಗೆದಿರುವ ಪೋಟೋವನ್ನು ಕೂಡ ಪೋಸ್ಟ್ ಮಾಡಿದ್ದಾರೆ.
“XUV 400 ಸ್ವೀಕರಿಸಲಾಗಿದೆ. ನನ್ನ ಪೋಷಕರು ತುಂಬಾ ಸಂತೋಷವಾಗಿದ್ದಾರೆ. ತುಂಬಾ ಧನ್ಯವಾದಗಳು ಆನಂದ್ ಮಹೀಂದ್ರಾ, ಸರ್” ಎಂದು ಪೋಸ್ಟ್ ಮಾಡಿದ್ದಾರೆ.
Received XUV 400 , My Parents are very happy 😊 Thank you very much @anandmahindra sir🙏 https://t.co/5ZmogCLGF4 pic.twitter.com/zmwMP2Ltza
— Praggnanandhaa (@rpraggnachess) March 12, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.